ವೇಣೂರು: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸರಕಾರಿ ಪ್ರೌಢ ಶಾಲೆಯಲ್ಲಿ 621ಅಂಕದೊಂದಿಗೆ ಪ್ರಥಮ ಹಾಗೂ ತಾಲೂಕಿಗೆ ಮೂರನೇ ಸ್ಥಾನ ಪಡೆದ ಮೂಡುಕೋಡಿ ಗ್ರಾಮದ ಹುಲ್ಲೋಡಿ ವನಿತಾ ಸದಾನಂದ ಪೂಜಾರಿಯವರ ಪುತ್ರಿ ಸುಪ್ರಿಯಾ ಎಸ್. ಇವರನ್ನು ಮೂಡುಕೋಡಿ ಬಿಲ್ಲವ ಸಂಘ ಮತ್ತು ವೇಣೂರು ಯುವವಾಹಿನಿ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ವೇಣೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಪಾಟೀಲ್, ವೇಣೂರು ಯುವವಾಹಿನಿ ಘಟಕದ ಅಧ್ಯಕ್ಷ ಶುಭಕರ್ ಪೂಜಾರಿ ಸಾವ್ಯ, ಯುವವಾಹಿನಿ ಕೇಂದ್ರ ಸಮಿತಿಯ ಆಂತರಿಕ ಲೆಕ್ಕ ಪರಿಶೋಧಕ ಅರುಣ್ ಕೋಟ್ಯಾನ್, ಮೂಡುಕೋಡಿ ಗ್ರಾಮ ಸಮಿತಿಯ ಅಧ್ಯಕ್ಷ ರವೀಂದ್ರ ಪೂಜಾರಿ, ವೇಣೂರು ಬಿಲ್ಲವ ಸಂಘದ ಕಾರ್ಯದರ್ಶಿ ರಾಕೇಶ್ ಕುಮಾರ್ ಮೂಡುಕೋಡಿ, ಕೋಶಾಧಿಕಾರಿ ಯೋಗೀಶ್ ಬಿಕ್ರೋಟ್ಟು, ಪ್ರಮುಖರಾದ ನ್ಯಾಯವಾದಿ ಸತೀಶ್ ಪಿ.ಎನ್., ವಸಂತ್ ಕೋಟ್ಯಾನ್ ವಿ.ಕೆ. ಇಲೆಕ್ಟ್ರಾನಿಕ್ಸ್, ಅಂಡಿಂಜೆ ಗ್ರಾ.ಪಂ.ಸದಸ್ಯ ಸುರೇಶ್ ಪುಂಡಿಕಾಯರ್, ನವೀನ್ ಪೂಜಾರಿ, ಸುಧಾಕರ್ ಪೂಜಾರಿ, ನಿತ್ಯಾನಂದ ಉಪಸ್ಥಿತರಿದ್ದರು.