
ಬೆಳ್ತಂಗಡಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯ ವತಿಯಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ಬೆಳ್ತಂಗಡಿ ಮೂರು ಮಾರ್ಗದ ಧ್ವಜ ಕಟ್ಟೆ ಬಳಿ ಮೊಂಬತ್ತಿ ಬೆಳಗಿಸಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿ ಘಟನೆಯನ್ನು ತೀವ್ರವಾಗಿ ಖಂಡಿಸಲಾಯಿತು.
ಕೆಪಿಸಿಸಿ ಸದಸ್ಯ ಕೇಶವ ಪಿ. ಬೆಳಾಲು, ಉಭಯ ಬ್ಲಾಕ್ ಅಧ್ಯಕ್ಷರಾದ ಸತೀಶ್ ಕೆ. ಕಾಶಿಪಟ್ಟಣ, ನಾಗೇಶ್ ಕುಮಾರ್ ಗೌಡ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಪದ್ಮನಾಭ ಸಾಲಿಯನ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಶೇಖರ ಕುಕ್ಕೆಡಿ, ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಕುಮಾರ್ ಲಾಯಿಲ, ನಗರ ಪಂಚಾಯತ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಗದೀಶ್ ಡಿ., ಯುವ ಕಾಂಗ್ರೆಸ್ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹಕ್ಕೀಂ ಕೊಕ್ಕಡ , ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಅಭಿನಂದನ ಹರೀಶ್ ಕುಮಾರ್, ಯುವ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಧ್ಯಕ್ಷ ಅಝರ್ ನಾವೂರು, ಉಪಾಧ್ಯಕ್ಷರಾದ ನವೀನ್ ಗೌಡ ಸವನಾಲು, ಅರುಣ್ ಲೋಬೋ, ಪಕ್ಷದ ಪ್ರಮುಖರಾದ ತಂಗಚ್ಚನ್ ಧರ್ಮಸ್ಥಳ, ಹರೀಶ್ ಸುವರ್ಣ ಕನ್ಯಾಡಿ, ಅರುಣ್ ಮತ್ತಿಲ್ಲ ಧರ್ಮಸ್ಥಳ, ಸಚಿನ್ ಕುಮಾರ್ ನೂಜೋಡಿ, ಪ್ರವೀಣ್ ಹಳ್ಳಿಮನೆ ಸೂರ್ಯನಾರಾಯಣ ಡಿ.ಕೆ., ಜೀನತ್ ಉಜಿರೆ, ಉಮೈರ ಬಾನು, ಪ್ರವೀಣ್ ಪಿಂಟೋ ಪೆರಾಡಿ, ಪ್ರಮೋದ್ ಕುಮಾರ್ ಮೆಚ್ಚಿನ, ಸುಧೀರ್ ಶೆಟ್ಟಿ ಮಚ್ಚಿನ, ನಾರಾಯಣ ಪೂಜಾರಿ ಮಚ್ಚಿನ, ಸದಾಶಿವ ಹೆಗಡೆ ಮಚ್ಚಿನ, ಇಲಿಯಾಸ್ ಜಿಲಿಂಬಿ, ಪ್ರಜ್ವಲ್ ಜೈನ್ ಅಳದಂಗಡಿ, ಧನಂಜಯ್ ರಾವ್, ದಿನೇಶ್ ಮೂಲ್ಯ ಕೊಂಡೆ ಮಾರ್, ಕುಶಾಲಪ್ಪ ಗೌಡ, ರವೀಂದ್ರ ಬಿ. ಅಮೀನ್ ಪುರಂದರ ಪೆರಾಜೆ, ಅಶ್ವಿನ್ ಬಳೆಂಜ, ಜನಾರ್ಧನ್ ಬೆಳ್ತಂಗಡಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.