

ಉಜಿರೆ: ಶ್ರೀ. ಧ. ಮಂ. ವಸತಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಒಟ್ಟು 154 ವಿದ್ಯಾರ್ಥಿಗಳು ಹಾಜರಾಗಿ 154 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ. 100 ಫಲಿತಾಂಶ ದಾಖಲಿಸಿಕೊಂಡಿದ್ದಾರೆ. 89 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 65 ವಿದ್ಯಾರ್ಥಿಗಳು ಪ್ರಥಮ, ಶೇ.95 ಮೇಲ್ಪಟ್ಟು 12, ಶೇ.90 ಮೇಲ್ಪಟ್ಟು 41, ಶೇ.85 ಮೇಲ್ಪಟ್ಟು ಅಂಕ ಪಡೆದ 36 ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ವಿವೇಕ್ 583, ಮೋಹಿತ್ 581, ಶಮಂತ್ 580 ಅತೀ ಹೆಚ್ಚು ಅಂಕ ಪಡೆದವರಾಗಿದ್ದಾರೆ.