

ಶಿಬಾಜೆ: ಗ್ರಾಮದ ಕೈರಂಡ ನಿವಾಸಿ, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಉದ್ಯೋಗಿ ನರಸಿಂಹ ಭಟ್ (78) ಮಾ. 24ರಂದು ರಾತ್ರಿ ನಿಧನರಾದರು. ಬೆಂಗಳೂರಿನ ಹೊಸಕೆರೆಹಳ್ಳಿ ನಿವಾಸದಲ್ಲಿ ಹೃದಯಾಘಾತಕ್ಕೊಳಗಾದ ಅವರನ್ನು ಚಿಕೆತ್ಸೆಗಾಗಿ ಆಸ್ಪತ್ರೆಗೆ ಕೊಂಡೊಯ್ಯುವಾಗ ದಾರಿ ಮಧ್ಯೆ ಕೊನೆಯುಸಿರೆಳೆದರೆಂದು ಕುಟುಂಬ ಮೂಲಗಳು ತಿಳಿಸಿವೆ.
ಮೃತರ ಪುತ್ರ ಕಿರಣ್ ಆಸ್ಟ್ರೇಲಿಯಾದಲ್ಲಿ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ನಿ ಪ್ರೇಮಾ ಭಟ್, ಪುತ್ರಿ ಡಾ.ಶೋಭಾ ಭಟ್, ಅಳಿಯ ರಾಜೇಂದ್ರ ಭಟ್, ಸೊಸೆ ಅನುಶ್ರೀ ಕಿರಣ್ ರವರನ್ನು ಅಗಲಿದ್ದಾರೆ.