ಅರಸಿನಮಕ್ಕಿ: ಬರ್ಗುಳ ನಿವಾಸಿ ಯಕ್ಷಗಾನದ ಹಿಮ್ಮೇಳ ಮತ್ತು ಮುಮ್ಮೆಳದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಬಿ. ಗೋಪಾಲ ಕೃಷ್ಣ ಕುರುಪ್ (90) ಮಾ. 18ರಂದು ನಿಧನ ಹೊಂದಿದ್ದಾರೆ. ಕರ್ನಾಟಕ ಹಾಗೂ ಕೇರಳ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು, ಧರ್ಮಸ್ಥಳ ಯಕ್ಷಗಾನ ಕೇಂದ್ರದ ಪ್ರಥಮ ನಾಟ್ಯ ಗುರುಗಳಾಗಿ ತೆಂಕುತಿಟ್ಟು ಯಕ್ಷಗಾನದ ಚೆಂಡೆ ವಾದನ ಕ್ರಮ ಮದ್ದಳೆ ವಾದನ ಕ್ರಮದ ಕುರಿತಾಗಿ ಪಠ್ಯ ರಚಿಸಿದ್ದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇರಳ ರಾಜ್ಯ ಗುರುಪೂಜಾ ಪುರಸ್ಕಾರ ಇವರಿಗೆ ಲಭಿಸಿದ್ದು ಯಕ್ಷಗಾನ ರಂಗದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಇವರು ಅಪಾರ ಅಭಿಮಾನಿ ವರ್ಗ ಶಿಷ್ಯ ಬಳಗವನ್ನು ಹೊಂದಿದ್ದರು. ಮೃತರು ಪತ್ನಿ, ಮಕ್ಕಳಾದ ಸುಬ್ರಮಣ್ಯ ಬಿ, ಅನಿತಾ, ಜಯಂತಿರವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಮಾ. 20ರಂದು ಸಂಜೆ ಕೇರಳ ರಾಜ್ಯದ ಪಟ್ಟೆನದ ಪಾಲಕ್ಕುಲಿಯಲ್ಲಿ ನಡೆಯಲಿದೆ ಎಂದು ಅವರ ಕುಟುಂಬಸ್ಥರು ಆಗಿರುವ ಶಿಬಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ದಿನಕರ್ ಕುರುಪ್ ತಿಳಿಸಿದ್ದಾರೆ.