ಬೆಳ್ತಂಗಡಿ: 2025 ನೇ ಸಾಲಿನ ಸಮಸ್ತ ಕೇರಳ ಸುನ್ನೀ ವಿದ್ಯಾಭ್ಯಾಸ ಬೋರ್ಡ್ (ಇಸ್ಲಾಮಿಕ್ ಎಜುಕೇಶನ್ ಬೋರ್ಡ್) ನಡೆಸಿದ ಪಬ್ಲಿಕ್ ಪರೀಕ್ಷೆಯಲ್ಲಿ, ನೂರುಲ್ ಹುದಾ ಸೆಕೆಂಡರಿ ಮದ್ರಸ ನೆಕ್ಕಿಲು ಇಲ್ಲಿನ, 7ನೇ ತರಗತಿ ವಿದ್ಯಾರ್ಥಿನಿ ಆಯಿಷತ್ ಸದೀದಾ 5 ವಿಷಯಗಳಲ್ಲಿ A+ ಪಡೆಯುವುದರೊಂದಿಗೆ, ಒಟ್ಟು 600ರಲ್ಲಿ 569 ಅಂಕ ಪಡೆದು ಮದ್ರಸಕ್ಕೆ ಕೀರ್ತಿ ತಂದಿರುತ್ತಾರೆ.
ಇವಳು ಎನ್. ಎಂ. ಶರೀಫ್ ಸಖಾಫಿ ನೆಕ್ಕಿಲ್ ಹಾಗೂ ಫಾತಿಮತ್ ಸಲೀಮಾ ಜೋಗಿಬೆಟ್ಟು ದಂಪತಿಗಳ ಪುತ್ರಿ ಆಗಿರುತ್ತಾರೆ.