ಉಜಿರೆಗೆ ಆಗಮಿಸಿದ ನಂದಿ ರಥ ಯಾತ್ರೆ

0

ಉಜಿರೆ: ಗೋ ಸೇವಾ ಗತಿವಿಧಿ ಕರ್ನಾಟಕ, ರಾಧಾ ಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್‌, ಇದರ ನಂದಿ ರಥಯಾತ್ರೆಯು. ಡಿ. 31ರಿಂದ ಪ್ರಾರಂಭಗೊಂಡು ರಾಜ್ಯಾದ್ಯಂತ ನಡೆಯುತ್ತಿದ್ದು, ಮಾ.18ರಂದು ಸಂಜೆ ಧರ್ಮಸ್ಥಳ, ಕನ್ಯಾಡಿ ಮಾರ್ಗವಾಗಿ ಉಜಿರೆಗೆ ಪ್ರವೇಶಿಸಿದೆ.

ಬೆಳಾಲು ಕ್ರಾಸ್ ಬಳಿ ಭವ್ಯ ಸ್ವಾಗತ ಕೋರಲಾಯಿತು. ಹಿಂದೂ ಮುಖಂಡರು ಹಾಗೂ ಆರ್. ಎಸ್. ಎಸ್ ಮುಖಂಡರು, ಉದ್ಯಮಿಗಳು, ಸಾರ್ವಜನಿಕರು ಒಟ್ಟಾಗಿ ಸೇರಿ ನಂದಿ ರಥಕ್ಕೆ ಗೌರವಾರ್ಪಣೆ ಮಾಡಿ ಶುಭ ಹಾರೈಸಿದರು.

ನಂತರ ಚೆಂಡೆ, ಕುಣಿತ ಭಜನೆ ಮೂಲಕ ಭವ್ಯ ಮೆರವಣಿಗೆಯೊಂದಿಗೆ ಉಜಿರೆ ಜನಾರ್ದನ ದೇವಸ್ಥಾನದ ಮುಂಭಾಗಕ್ಕೆ ಬಂದಾಗ ಉಜಿರೆ ಜನಾರ್ದನ ದೇವಸ್ಥಾನದ
ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಹಾಗೂ ತಾಲೂಕು ನಂದಿ ರಥಯಾತ್ರೆ ಸಂಚಾಲನ ಸಮಿತಿಯವರು ನಂದಿಗೆ ಹೂ ಹಾರ ಹಾಕಿ ಸ್ವಾಗತಿಸಿದರು. ಬಳಿಕ ಶಾರದ ಮಂಟಪದಲ್ಲಿ ವಿಷ್ಣು ಸಹಸ್ರ ನಾಮ ಪಾರಾಯಣ ನಡೆದು ನಂತರ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ವಹಿಸಿದ್ದರು. ರಾಧಾ ಸುರಭಿ ಗೋಮಂದಿರ ರಾಷ್ಟ್ರೀಯ ಗೋಸೇವಾ ಸಂಸ್ಥಾನದ ಅಧ್ಯಕ್ಷ ಭಕ್ತಿ ಭೂಷಣ್ ದಾಸ್ ರವರು ದಿಕ್ಸುಚಿ ಭಾಷಣ ನೆರವೇರಿಸಿದರು. ವೇದಿಕೆಯಲ್ಲಿ ಕಳಂಜ ನಂದಗೋಕುಲ ಸ್ವಾಮಿಶ್ರೀ ವಿವೇಕಾನಂದ ಸೇವಾಶ್ರಮದ ಅಧ್ಯಕ್ಷ ಎಂ.ಎಂ. ದಯಾಕರ್,
ನಂದಿ ರಥಯಾತ್ರೆಗೆ ಚಾಲನೆ ನೀಡಿದಂತಹ ದೇಸೀ ಗೋಸಂರಕ್ಷಕ ರಮೇಶ್ ಎಸ್. ಬೆಳ್ತಂಗಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಸಹ ಕಾರ್ಯವಾಹ ಸುಭಾಷ್ ಕಳಂಜ ಉಪಸ್ಥಿತರಿದ್ದರು.

ಉದ್ಯಮಿಗಳಾದ ಉಜಿರೆಯ ಪದ್ಮನಾಭ ಶೆಟ್ಟಿಗಾ‌ರ್, ರಾಮಚಂದ್ರ ಶೆಟ್ಟಿ, ಪ್ರಶಾಂತ್‌ ಜೈನ್‌, ಭರತ್‌ ಕುಮಾರ್, ಉಜಿರೆ ಗ್ರಾ. ಪಂ. ಉಪಾಧ್ಯಕ್ಷ ರವಿಕುಮಾ‌ರ್ ಬರಮೇಲು ವರ್ತಕರ ಸಂಘದ ಅರವಿಂದ ಕಾರಂತ್‌, ರವೀಂದ್ರ ಶೆಟ್ಟಿ ಬಳಂಜ, ಯಕ್ಷಗಾನ ಭಾಗವತ ಮಹೇಶ್ ಕನ್ಯಾಡಿ, ಶಶಿಧರ ಕಲ್ಮ೦ಜ, ಸೋಮಶೇಖ‌ರ್ ಶೆಟ್ಟಿ, ತಿಮ್ಮಪ್ಪ ಗೌಡ ಬೆಳಾಲು, ಯಶವಂತ ಪುದುವೆಟ್ಟು, ರಮೇಶ್ ಮುಂಡ ತ್ತೋಡಿ, ದಿನೇಶ್ ಚಾರ್ಮಾಡಿ, ಅಶೋಕ ಕರ್ಕೇರ ಮುಂಡ ತ್ತೋಡಿ, ರಾಘವ ಕಲ್ಮಂಜ, ಎಸ್. ಜಿ. ಭಟ್, ಪುಷ್ಪಾವತಿ ಆರ್.ಶೆಟ್ಟಿ, ಸಂತೋಷ್ ಅತ್ತಾಜೆ, ಪ್ರಸಾದ್ ಬಿ. ಎಸ್., ಕಜೆ ವೆಂಕಟೇಶ್ ಭಟ್, ಸುದರ್ಶನ್ ಕೆ. ವಿ. ಕನ್ಯಾಡಿ,
ವಿಶ್ವಹಿಂದೂ ಪರಿಷತ್‌, ಭಜರಂಗದಳದ ಕಾರ್ಯಕರ್ತರು, ಇನ್ನಿತರರು, ವ್ಯಾಪಾರಸ್ಥರು ಉಪಸ್ಥಿತರಿದ್ದರು.

ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್ ಸ್ವಾಗತಿಸಿದರು. ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯಾಧ್ಯಕ್ಷ ನವೀನ್ ನೆರಿಯ ನಿರೂಪಿಸಿದರು.

LEAVE A REPLY

Please enter your comment!
Please enter your name here