ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಮಾ. 6ರಂದು ನಿಧನರಾದ ಕೀರ್ತಿಶೇಷ ಎನ್. ಪದ್ಮನಾಭ ಮಾಣಿಂಜರಿಗೆ ಮಾ. 15ರಂದು ಸಂಘದ ಕೇಂದ್ರ ಕಛೇರಿ ಶ್ರೀ ಗುರು ಸಾನಿಧ್ಯ ಸಭಾ ಭವನದಲ್ಲಿ ಸಭಾಂಗಣದಲ್ಲಿ “ಅದಮ್ಯ ಚೇತನ ಅಮರತ್ವದೆಡೆಗೆ” ನುಡಿನಮನ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ಅಧ್ಯಕ್ಷತೆಯನ್ನು ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಭಗೀರಥ ಜಿ. ವಹಿಸಿದ್ದರು. ಬೆಂಗಳೂರು ಸೋಲೂರು ಮಠ ಆರ್ಯ ಈಡಿಗ ಮಹಾ ಸಂಸ್ಥಾನದ ಪೀಠಾಧೀ ಶ ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷ ಶ್ರೀಧರ್ ಜಿ. ಬಿಡೆ ನುಡಿ ನಮನ ಸಲ್ಲಿಸಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್., ಪದ್ಮನಾಭಾ ರವರ ಹಿರಿಯ ಪುತ್ರ ಸುಧೀರ್, ಸಂಘದ ನಿರ್ದೇಶಕರುಗಳಾದ ಜಗದೀಶ್ಚಂದ್ರ ಡಿ. ಕೆ., ಕೆ.ಪಿ. ದಿವಾಕರ, ತನುಜಾ ಶೇಖರ್, ಸಂಜೀವ ಪೂಟಾರಿ ಚಂದ್ರಶೇಖರ್, ಅನಂದ ಪೂಜಾರಿ ಸರ್ವೆದೋಳ, ಡಾ. ರಾಜಾರಾಮ್, ಗಂಗಾಧರ ಮಿತ್ತಮಾರು, ಚಿದಾನಂದ ಪೂಜಾರಿ ಎಲ್ದಕ್ಕ, ಜಯವಿಕ್ರಮ ಪಿ. ಕಲ್ಲಾಪು, ವಿಶೇಷಾಧಿಕಾರಿ ಎಂ. ಮೋನಪ್ಪ ಪೂಜಾರಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಶ್ವಥ್, ನಿರ್ದೇಶಕ ಧರಣೇಂದ್ರ, ಶಾಖಾ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವರ್ಗ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಪದಾಧಿಕಾರಿಗಳು, ನಿರ್ದೇಶಕರು, ಶ್ರೀ ಗುರುದೇವ ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು, ಪದ್ಮನಾಭಾರವರ ಹಿತೈಷಿಗಳು ಹಾಜರಿದ್ದರು.