
ಬೆಳ್ತಂಗಡಿ: ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಾರಿ ಸಂಘದ ನಿವೃತ್ತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಂದ್ರಕಾಂತ ಪ್ರಭು ಇವರನ್ನು ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನಲ್ಲಿ ಬಿಳ್ಕೊಡುಗೆ ಸಮಾರಂಭವು ಮಾ.6ರಂದು ಬೆಳ್ತಂಗಡಿ ಎಸ್ ಡಿ ಸಿ ಸಿ ಬ್ಯಾಂಕಿನ ಲ್ಲಿ ಆಯೋಜಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ಡಿಸಿಸಿ ಬ್ಯಾಂಕಿನ ನಿರ್ಧೇಶಕರಾದ ಕುಶಾಲಪ್ಪ ಗೌಡ ವಹಿಸಿಕೊಂಡು, ಮುಖ್ಯ ಅತಿಥಿಗಳಾಗಿ ಸ.ಸಂ.ಸಹಾಯಕ ನಿಬಂದಕರಾದ .ಎಸ್.ಯಂ.ರಘು, ಸಿಡಿಓ ಪ್ರತಿಮಾ, ಸಿ.ಈ.ಓ ಯೂನಿಯನ್ ಅಧ್ಯಕ್ಷ ಸುಕೇಶಿನಿ, ಪಡಂಗಡಿ ಪ್ಯಾಕ್ಸ್ ಸಿಈಓ ಹಾಗೂ ಸುಧೀರ್ ಡಿಸಿಸಿ ಬೆಳ್ತಂಗಡಿ ಶಾಖಾ ಮ್ಯಾನೇಜರ್ ಹಾಗೂ ಮೇಲ್ವಿಚಾರಕರಾದ ಸುದರ್ಶನ ಹಾಗೂ ಸಿರಾಜುದ್ದೀನ್ ಉಪಸ್ಥಿತರಿದ್ದರು.
ಯೂನಿಯನ್ ವತಿಯಿಂದ ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚಂದ್ರಕಾಂತ ಪ್ರಭು ನಿವೃತ್ತ ಸಿಈಓ ರವರನ್ನು ಬಿಳ್ಕೊಡುವುದರ ಮೂಲಕ 42 ವರ್ಷಗಳ ಸುದೀರ್ಘ ಸೇವೆ, ಹಾಗೂ ಅವರ ಮುಂದಿನ ಜೀವನಕ್ಕೆ ಶುಭ ಹಾರೈಸಲಾಯಿತು.
ಕಾರ್ಯಕ್ರಮವನ್ನು ಎಲ್ಲಾ ಬೆಳ್ತಂಗಡಿ ತಾಲೂಕಿನ ಸಿಈಓ ರವರ ಪಾಲ್ಗೊಲ್ಲುವಿಕೆ ಮೂಲಕ ಅನಂತಕೃಷ್ಣ ಭಟ್ ರವರ ಪ್ರಾರ್ಥನೆ ಯೊಂದಿಗೆ ನಡೆದು ಪದ್ಮನಾಭ ನಿಡ್ಡೆ ಪ್ಯಾಕ್ಸ್ ಸಿಈಓ ಸ್ವಾಗತಿಸಿ, ಶಶಿಕಾಂತ್ ನಾರಾವಿ ಪ್ಯಾಕ್ಸ್ ಸಿಈಓ ನಿರೂಪಿಸಿ, ಪ್ರಸಾದ್ ಬೆಳ್ತಂಗಡಿ ಪ್ಯಾಕ್ಸ್ ಸಿಈಓ ಧನ್ಯವಾಧ ನೀಡಿದರು.