
ಕೊಕ್ಕಡ: ಸರಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಂಬುಲೆನ್ಸ್ ಕಳೆದ ಒಂದು ತಿಂಗಳಿನಿಂದ ನಾಲ್ಕು ಚಕ್ರಗಳು ಪಂಚರ್ ಆಗಿ ಸೇವೆಗೆ ಯೋಗ್ಯವಿಲ್ಲದೆ ಪಾಳು ಬಿದ್ದ ಪರಿಸ್ಥಿತಿಯಲ್ಲಿ ಇತ್ತು.
ಇದನ್ನು ಮನಗಂಡ ಕೊಕ್ಕಡ ಪಂಚಾಯತ್ ಮಾಜಿ ಅಧ್ಯಕ್ಷ ಯೋಗೀಶ್ ಆಳಂಬಿಲ ಸುದ್ದಿ ನ್ಯೂಸ್ ಗೆ ವರದಿ ಮಾಡುವಂತೆ ತಿಳಿಸಿದ್ದು, ಸುದ್ದಿ ನ್ಯೂಸ್ ಬೆಳ್ತಂಗಡಿ ಮತ್ತು ಪುತ್ತೂರು ಪತ್ರಿಕೆಯಲ್ಲಿ ವರದಿ ಬಿತ್ತರಿಸಿತ್ತು. ವರದಿ ಮಾಡಿದ ಕೆಲವೇ ದಿನಗಳಲ್ಲಿ108 ಆಂಬುಲೆನ್ಸ್ ನಿರ್ವಹಣೆ ಗುತ್ತಿಗೆ ಪಡೆದಿದ್ದ ಸಂಸ್ಥೆ ನಾಲ್ಕು ಹೊಸ ಚಕ್ರಗಳನ್ನು ಅಳವಡಿಸಿ ಕೊಟ್ಟಿದ್ದು ಕೊಕ್ಕಡ ಆಸುಪಾಸಿನ ಜನರಿಗೆ ತುರ್ತು ಸಂಧರ್ಭ ಎದುರಾದಲ್ಲಿ ಸೇವೆಗೆ ಲಭ್ಯವಿರಲಿದೆ.