ಕರಿಮಣೇಲು ಸಂತ ಜೂಡರ ಶಾಲೆಯಲ್ಲಿ ದವಳ ಕಾಲೇಜು ಎನ್. ಎಸ್. ಎಸ್ ಶಿಬಿರದ ಸಮಾರೋಪ ಸಮಾರಂಭ

0

ವೇಣೂರು: ಮೂಡಬಿದ್ರೆ ಶ್ರೀ ದವಳ ಕಾಲೇಜಿನ ಎನ್. ಎಸ್. ಎಸ್ ಶಿಬಿರ ಕರಿಮಣೇಲು ಸಂತ ಜೂಡರ ಅನುಧಾನಿತ ಹಿ. ಪ್ರಾ. ಶಾಲೆಯಲ್ಲಿ ಫೆ. 8ರಿಂದ 14ರವರೆಗೆ ನಡೆಯಿತು. ಸಮಾರೋಪ ಸಮಾರಂಭ ಫೆ. 14ರಂದು ದವಳ ಕಾಲೇಜು ಪ್ರಾಂಶುಪಾಲ ಪಾರ್ಶ್ವನಾಥ ಅಜ್ರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಅವರು ಮಾತನಾಡಿ ಎನ್. ಎಸ್. ಎಸ್ ಒಬ್ಬ ವ್ಯಕ್ತಿಯ ಪರಿಪೂರ್ಣತೆಗೆ ಹೇಗೆ ಸಾಧ್ಯವಾಗುತ್ತದೆ ಎನ್ನುವಂತದ್ದನ್ನು ವಿವರಿಸಿದರು.

ಸಮಾರೋಪ ಸಮಾರಂಭದ ಸಮರೋಪ ಭಾಷಣವನ್ನು ಡಿ. ಜೆ. ವಿ ಸಂಘದ ಸಂಚಾಲಕ ಕೆ. ಹೇಮರಾಜ್ ಮಾತನಾಡಿ ಎನ್. ಎಸ್. ಎಸ್ ಕೈಗೊಂಡ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳು ಯಶಸ್ವಿಯಾಗಲು ಇಂತಹ ಕಾರ್ಯಕ್ರಮಗಳನ್ನು ಅಯೋಜಿಸುವುದರಿಂದ ಸಾಧ್ಯವಾಗುತ್ತದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಲಾ ಮುಖ್ಯ ಶಿಕ್ಷಕಿ ಮಾಸರ್ಲಿನ್ ಲೀನಾ ಪಿರೇರಾ ಜಿ., ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್, ಕುಂಭಶ್ರೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗಿರೀಶ್ ಕೆ. ಎಚ್., ಎಚ್. ಮೊಹಮ್ಮದ್ ವೇಣೂರು, ಶ್ರೀಧರ ಆಚಾರ್ಯ ಉದ್ಯಮಿ ಲಾರೆನ್ಸ್ ಲೋಬೊ, ಅರವಿಂದ ಶೆಟ್ಟಿ ಖಂಡಿಗ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕರು ಹಾಗೂ ಎನ್. ಎಸ್. ಎಸ್ ಕಾರ್ಯಕ್ರಮಾಧಿಕಾರಿ ಯಶೋದಾ ಸ್ವಾಗತಿಸಿದರು. ದೀಪಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು. ನಾಯಕಿ ಮೇಘ ಕುಮಾರಿ, ದಿವ್ಯ ಶ್ರೀ, ಸುಜನ್, ಸಾನ್ವಿತ್ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಹಾಗೂ ಎನ್. ಎಸ್. ಎಸ್ ಕಾರ್ಯಕ್ರಮಾಧಿಕಾರಿ ಸಂತೋಷ ವಂದಿಸಿದರು.

LEAVE A REPLY

Please enter your comment!
Please enter your name here