ವೇಣೂರು: ಹೊಸಂಗಡಿ ಗ್ರಾಮದ ಅನುಗ್ರಹ ಕಾಪ್ಲೆಕ್ಸ್ನಲ್ಲಿ ಬಂಟರ ಗ್ರಾಮ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜ.19 ರಂದು ಜರುಗಿದ್ದು, ನೂತನ ಅಧ್ಯಕ್ಷರಾಗಿ ರವಿಚಂದ್ರ ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಸ್ಥಾಪಕ ಅಧ್ಯಕ್ಷ ಸೀತಾರಾಮ್ ರೈ, ಮಾಜಿ ಅಧ್ಯಕ್ಷ ಭೋಜ ಶೆಟ್ಟಿ, ವಲಯ ಅಧ್ಯಕ್ಷ ದೇಜಪ್ಪ ಶೆಟ್ಟಿ, ರಮೇಶ್ ಶೆಟ್ಟಿ, ವಿಶಾಲ್ ಕೀರ್ತಿ, ಭೋಜ ಶೆಟ್ಟಿ ಪಾದೆಮನೆ ಸಭೆಯ ಅಧ್ಯಕ್ಷತೆ ಯನ್ನು ಜಯಂತ್ ಶೆಟ್ಟಿ, ಬಂಟರ ಸಂಘ ಬೆಳ್ತಂಗಡಿ ವಹಿಸಿದ್ದರು.
ಉಪಾಧ್ಯಕ್ಷ ಲೋಹಿತ್ ರೈ ಸ್ವಾಗತಿಸಿದರು. ರವಿಚಂದ್ರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಜಾತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ದುರ್ಗಾಪ್ರಸಾದ್ ವಂದಿಸಿದರು.