ಪಂಡಿಜೆ: ” ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳ ಜೀವನದ ಶೈಲಿಯನ್ನು ಬದಲಿಸುದರೊಂದಿಗೆ ಅವರಲ್ಲಿನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ” ಎಂದು ಕುಕ್ಕೇಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಕೆ. ಪಾಣೂರು ಹೇಳಿದರು.
ದ. ಕ. ಜಿ. ಪಂ. ಹಿ. ಪ್ರಾ ಶಾಲೆ ಫoಡಿಜೆವಾಳ್ಯ ನಡೆಯುತ್ತಿರುವ ಸಂತ ಅಂತೋನಿ ಪದವಿ ಕಾಲೇಜು ನಾರಾವಿಯ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅಧ್ಯಕ್ಷ ಸ್ಥಾನವನ್ನ ವಹಿಸಿ ಮಾತನಾಡಿದ ಸಂತ ಅಂತೋನಿ ಪದವಿ ಕಾಲೇಜಿನ ಪ್ರಾಂಶುಪಾಲ ಆಲ್ವಿನ್ ಸೆರಾವೋ “ಎನ್. ಎಸ್. ಎಸ್. ವಿದ್ಯಾರ್ಥಿಗಳು ಶಿಬಿರದಲ್ಲಿ ಕಳೆಯುವ ಅಷ್ಟೂ ಸಮಯವು ಅವರ ವ್ಯಕ್ತಿತ್ವ ಹಾಗೂ ದೇಶದ ಸೇವೆ ಮಾಡುವಲ್ಲಿ ಸಹಕಾರಿಯಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಕೋಟಿ ಚೆನ್ನಯ ಸೇವಾ ಸಂಘ ಕುಕ್ಕೆಡಿಯ ಗೌರವಾಧ್ಯಕ್ಷ ಅಮ್ಮಾಜಿ ಕೆ. ಹಿರ್ತೊಟ್ಟು, ಕುಕ್ಕೇಡಿ ಗ್ರಾಮ ಪಂಚಾಯತಿನ ಮಾಜಿ ಉಪಾಧ್ಯಕ್ಷ ಅಶೋಕ್ ಪಾಣೂರು,
ಕುಕ್ಕೇಡಿ ಗ್ರಾಮ ಪಂಚಾಯತಿನ ಸದಸ್ಯ ದಿನೇಶ್ ಮೂಲ್ಯ, ಜನಾರ್ದನ ಪೂಜಾರಿ, ಗೀತಾ, ಫoಡಿಜೆವಾಳ್ಯ ಶಾಲೆಯ ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಭವನೀಶ್ ಫoಡಿಜೆ, ಎಸ್. ಡಿ. ಎಂ. ಸಿ., ಅಧ್ಯಕ್ಷ ಸ್ವಾತಿ, ಸಂತ ಅಂತೋನಿ ಪದವಿ ಕಾಲೇಜು ನಾರಾವಿಯ ಉಪಪ್ರಾoಶುಪಾಲ ಸಂತೋಷ್ ಸಲ್ದಾನ, ಸಂತ ಅಂತೋನಿ ಪದವಿ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಶರಣ್ಯ, ಎನ್. ಎನ್. ಎಸ್ ಕಾರ್ಯದರ್ಶಿಗಳಾದ ವಿವೇಕ್ ಹಾಗು ರಶ್ವಿತಾ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ದಿನೇಶ್ ಬಿ. ಕೆ. ಬಳoಜ ತಮ್ಮ ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರೆ, ಸಹಯೋಜನಾಧಿಕಾರಿ ಸಂತೋಷ್ ದೇವಾಡಿಗ ಇವರು ಕಾರ್ಯಕ್ರಮ ನಿರೂಪಿಸಿದರು. ಸಹ ಯೋಜನಾಧಿಕಾರಿ ಅವಿನಾಶ್ ಲೋಬೊ ಎಲ್ಲರಿಗೂ ಧನ್ಯವಾದವಿತ್ತರು.