ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ – ಇಕೋ ಫ್ರೆಶ್ ಎಂಟರ್ ಪ್ರೈಸಸ್ ಬೆಳ್ತಂಗಡಿ -ಪುತ್ತೂರು – ರೈತರಿಗೆ ಕೃಷಿ ಉಪಕರಣಗಳ ಪ್ರದರ್ಶನ ಮತ್ತು ಮಾರಾಟ

0

ಧರ್ಮಸ್ಥಳ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಧರ್ಮಸ್ಥಳ ಆಶ್ರಯದಲ್ಲಿ ಇಕೋ ಫ್ರೆಶ್ ಎಂಟರ್ ಪ್ರೈಸಸ್ ಬೆಳ್ತಂಗಡಿ/ಪುತ್ತೂರು ನಡೆಯುತ್ತಿರುವ ರೈತರಿಗಾಗಿ ಕೃಷಿ ಉಪಕರಣಗಳ ಪ್ರದರ್ಶನ ಹಾಗೂ ಮಾರಾಟ ಮೇಳವು ಜ.13 ರಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಟಲ್ ಜೀ ಸಭಾಭವನದಲ್ಲಿ ಉದ್ಘಾಟನೆಗೊಂಡಿತ್ತು.

ಈ ಮೇಳವು ಜ.18 ವರೆಗೆ ನಡೆಯಲಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಪ್ರೀತಮ್ ಡಿ., ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್, ಆಡಳಿತ ಮಂಡಳಿ ಸದಸ್ಯರಾದ ನೀಲಕಂಠ, ಶೀನ, ಧನಲಕ್ಷ್ಮಿ, ತಂಗಚ್ಚನ್, ಉಮಾನಾಥ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಶಿಧರ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಸುಂದರ ಡಿ., ಸಂಘದ ಮಾಜಿ ಅಧ್ಯಕ್ಷ ಭುಜಬಲಿ, ಇಕೋ ಪ್ರೆಶ್ ಮಾಲಿಕ ರಾಕೇಶ್ ಹೆಗ್ಡೆ, ಸಂಘದ ಸದಸ್ಯ ಪ್ರಭಾಕರ್, ಲೋಕೇಶ್ ಶೆಟ್ಟಿ, ರಂಗನಾಥ್, ಯಶವಂತ್, ಉಪಸ್ಥಿತರಿದ್ದರು.

ಸ್ವಾಗತ ಕಾರ್ಯಕ್ರಮವನ್ನು ಲೋಕೇಶ್ ಶೆಟ್ಟಿ ನೆರವೇರಿಸಿದರು.

LEAVE A REPLY

Please enter your comment!
Please enter your name here