ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಮಕರ ಸಂಕ್ರಮಣ ವಿಶೇಷ ಪೂಜೆ

0

p>

ಪಡಂಗಡಿ: ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ರಘುರಾಮ್ ಭಟ್ ಮಠ ನೇತೃತ್ವದಲ್ಲಿ ಜ. 14 ರoದು ಮಕರ ಸಂಕ್ರಮಣದ ಪ್ರಯುಕ್ತ ವಿಶೇಷ ಪೂಜೆ, ವಿವಿಧ ಭಜನಾ ಮಂಡಳಿ ತಂಡಗಳಿಂದ ವಿಶೇಷ ಭಜನಾ ಕಾರ್ಯಕ್ರಮ ಜರಗಿತು.

ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆ ಜರಗಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ದಿನೇಶ್ ಕೊಂಡೆಮಾರು, ಸದಸ್ಯರಾದ ಸತೀಶ್ ಭಂಗೇರ ಕುವೆಟ್ಟು, ಶಾಂಭವಿ ಪಿ. ಬಂಗೇರ ಉಪಸ್ಥಿತರಿದ್ದರು. ಭಕ್ತಾದಿಗಳು ಪೂಜಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here