ಸಕಾರಾತ್ಮಕವಾಗಿ ಯೋಚಿಸಿ-ಎಂ. ಜರ್ನಾಧನ್‌

0

p>

ಉಜಿರೆ: ನಾವು ಅತ್ಯಂತ ಕಷ್ಟದ ಸಮಯದಲ್ಲಿ ಸಹ ಸಕಾರಾತ್ಮಕವಾಗಿ ಯೋಚಿಸಿ ಮುನ್ನಡೆಯಬೇಕು. ನಾವು ಯಾರ ಜೊತೆಗೆ ಇದ್ದೇವೆ ಎನ್ನುವುದರ ಮೂಲಕ ನಮ್ಮ ಬೆಳವಣಿಗೆ ಇರುತ್ತದೆ. ನಾವು ಇನ್ಸ್ಪೈರ್ ಮತ್ತು ಮೋಟಿವೇಶನ್‌ ವ್ಯತ್ಯಾಸ ನಮಗೆ ಗೊತ್ತಿರಬೇಕು. ಪ್ರತಿಯೊಬ್ಬರಲ್ಲಿ ಸಹ ಪ್ರತಿಭೆ ಇರುತ್ತದೆ. ಆದರೆ ಅದಕ್ಕೆ ಬೇರೆ ಬೇರೆ ಲೇಪನ ಮಾಡಿಕೊಂಡ ಪರಿಣಾಮ ಹೊರ ಜಗತ್ತಿಗೆ ಕಾಣುವುದಿಲ್ಲ. ಅದಕ್ಕೆ ನಮ್ಮ ಮೇಲೆ ಇರುವ ಲೇಪನಗಳನ್ನು ತೆಗೆದು ನಮ್ಮ ವ್ಯಕ್ತಿತ್ವದ ಪ್ರತಿಭೆಯನ್ನು ಹೊರೆಗೆ ತೆಗೆಯುವ ಕೆಲಸವನ್ನು ರುಡ್‌ ಸೆಟ್‌ ಸಂಸ್ಥೆ ಮಾಡುತ್ತದೆ.

ನಿಮ್ಮಲ್ಲಿರುವ ದೌರ್ಬಲ್ಯ ಕಡಿಮೆ ಮಾಡಿಕೊಂಡು ಬೆಳೆಯಬೇಕು. ರುಡ್‌ ಸೆಟ್‌ ಸಂಸ್ಥೆ ಎನ್ನುವುದು ಭಾವನಾತ್ಮಕ ಸಂಬಂಧವನ್ನು ಬೆಳೆಸುವಂತಾಗಿದೆ. ಪೂಜ್ಯರ ಆಶಯ ಯುವ ಜನರಿಗೆ ವ್ಯವಹಾರ ಶೈಲಿಯನ್ನು ಕಲಿಸಿಕೊಡುಬೇಕು ಎನ್ನುವುದನ್ನು ರುಡ್‌ ಸೆಟ್‌ ಸಂಸ್ಥೆಯಲ್ಲಿ ಕಲಿಸುತ್ತಾರೆ. ದೇಶಾದಾದ್ಯಂತ ಲಕ್ಷಾಂತರ ಯುವಜನರ ಬದುಕನ್ನು ಬದಲಾಯಿಸಿದ ಸಂಸ್ಥೆ ರುಡ್‌ ಸೆಟ್‌ ಸಂಸ್ಥೆ. ನೀವು ಸಹ ಮುಂದಿನ ಬದುಕಿನಲ್ಲಿ ಹೊಸ ಬದಲಾವಣೆಯೊಂದಿಗೆ ಗುರಿ ತಲುಪಿ, ಯಶಸ್ಸು ನಿಮ್ಮದಾಗಲಿ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂ. ಮಲ್ಟಿ-ಸ್ಪೆಷಾಲಿಟಿ ಹಾಸ್ಟಿಟಲ್‌ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಎಂ. ಜರ್ನಾಧನ್‌ ಅಭಿಪ್ರಾಯ ಪಟ್ಟರು.

ರುಡ್ ಸೆಟ್ ಸಂಸ್ಥೆಯಲ್ಲಿ 10 ದಿನಗಳ ಕಾಲ ನಡೆದೆ ಗೃಹೋಪಯೋಗಿ ವಿದ್ಯುತ್‌ ಉಪಕರಣ ಸೇವಾ ಉದ್ಯಮಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತರಿಸಿ ತಮ್ಮ ಅನುಭವ ಹಂಚಿಕೊಂಡು, ಯಶಸ್ವಿಯಾಗಿ ಉದ್ಯಮ ನಡೆಸಿ ಎಂದು ಶುಭ ಹಾರೈಸಿದರು.

ಅತಿಥಿಗಳನ್ನು ಸಂಸ್ಥೆಯ ನಿರ್ದೇಶಕ ಅಜೇಯ ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಕೆ. ಕರುಣಾಕರ ಜೈನ್ ವಂದಿಸಿದರು. ವಿನುಷ್‌, ವರ್ಷಿತ್‌ ಮತ್ತು ಸಂಜಯ ಪ್ರಾರ್ಥನೆ ಮಾಡಿದರು. ಶಿಬಿರಾರ್ಥೀಗಳಾದ ಶ್ರೀ ಗಣೇಶ್‌, ಸಂಜಯ, ಪ್ರಶಾಂತ್‌ ತಮ್ಮ ತರಬೇತಿಯ ಅನುಭವ ಹಂಚಿಕೊಂಡರು.

LEAVE A REPLY

Please enter your comment!
Please enter your name here