p>
ಬೆಳಾಲು: ಅನಂತೋಡಿ ಶ್ರೀ ಅನಂತ ಪದ್ಮನಾಭಾ ದೇವಸ್ಥಾನದ ವಾರ್ಷಿಕ ಜಾತ್ರೆ ಡಿ. 24 ಮತ್ತು 25 ರಂದು ಜರಗಲಿದ್ದು, ಡಿ. 24 ರಂದು ಬೆಳಿಗ್ಗೆ ಭವ್ಯ ಮೆರವಣಿಗೆ ಮೂಲಕ ಹಸಿರುವಾಣಿ ಊರ ಭಕ್ತರು ಸಮರ್ಪಿಸಿದರು.
ಬೆಳಾಲು ಗುತ್ತು ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಪ್ರಾರ್ಥನೆಗೈದು ಅಲಕೆದಡ್ಡ ಬಾಬು ಗೌಡ ಹಸಿರುವಾಣಿ ಹೊರಕಾಣಿಕೆಗೆ ಚಾಲನೆ ನೀಡಿದರು. ಬಳಿಕ ಸಮಸ್ತ ಭಕ್ತಭಿಮಾನಿಗಳು ಮೆರವಣಿಗೆಯಲ್ಲಿ ಸಾಗಿ ಶ್ರೀ ಕ್ಷೇತ್ರಕ್ಕೆ ಸಮರ್ಪನೆ ಮಾಡಿದರು. ವ್ಯವಸ್ಥಾಪನಾ ಸಮಿತಿ ಹಾಗೂ ಜಾತ್ರೋತ್ಸವ ಸಮಿತಿಯು ಊರ ಭಕ್ತಾಭಿಮಾನಿಗಳನ್ನು ಬರಮಾಡಿಕೊಂಡರು.