ಮುಂಡಾಜೆ: ವಿವೇಕಾನಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಹೃದಯ- ಶ್ವಾಸಕೋಶದ ಪುನರ್ಚಾಲನೆ ( ಸಿಪಿಆರ್) ಮತ್ತು ಪ್ರಥಮ ಚಿಕಿತ್ಸೆಯ ಬಗ್ಗೆ ಮಾಹಿತಿ ಹಾಗೂ ತರಬೇತಿ ಕಾರ್ಯಕ್ರಮ

0

ಮುಂಡಾಜೆ: ವಿವೇಕಾನಂದ ಪದವಿ ಪೂರ್ವ ಕಾಲೇಜುನಲ್ಲಿ ನ.22 ರಂದು ಕಾಲೇಜಿನ ಜೂನಿಯರ್ ರೆಡ್ ಕ್ರಾಸ್ ವಿಭಾಗ ಮತ್ತು ಬೆನಕ ಹೆಲ್ತ್ ಸೆಂಟರ್ ಉಜಿರೆ ಇವರ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗಾಗಿ ಹೃದಯ-ಶ್ವಾಸಕೋಶದ ಪುನರ್ಚಾಲನೆ ( ಸಿಪಿಆರ್) ಮತ್ತು ಪ್ರಥಮ ಚಿಕಿತ್ಸೆಯ ಬಗ್ಗೆ ಮಾಹಿತಿ ಹಾಗೂ ತರಬೇತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಜಾಲಿ ಒ.ಎ. ವಹಿಸಿಕೊಂಡು, ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿನಯ ಚಂದ್ರ ತರಬೇತಿ ಕಾರ್ಯಕ್ರಮದ ಅಗತ್ಯತೆಯ ಬಗ್ಗೆ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆನಕ ಹೆಲ್ತ್ ಸೆಂಟರ್ ನ ಪ್ರಧಾನ ವ್ಯವಸ್ಥಾಪಕ ದೇವಸ್ಯ ವರ್ಗೀಸ್ ಪ್ರಾತ್ಯಕ್ಷಿತಯ ಮುಖಾಂತರ ತರಬೇತಿಯನ್ನು ನಡೆಸಿಕೊಟ್ಟರು.

ಬೆನಕ ಹೆಲ್ತ್ ಸೆಂಟರ್ ನ ಸಿಬ್ಬಂದಿ ವರ್ಗದವರಾದ ನಜೀರ್, ಅಶ್ವಿನಿ ಹಾಗೂ ಆದರ್ಶ್ ಸಹಕಾರ ನೀಡಿದರು. ಮುಂಡಾಜೆ ಕಾಲೇಜಿನ ಜೂನಿಯರ್ ರೆಡ್ ಕ್ರಾಸ್ ಕೌನ್ಸೆಲ್ಲರ್ ಪುರುಷೋತ್ತಮ ಶೆಟ್ಟಿ ಸ್ವಾಗತಿಸಿ, ಪ್ರಸ್ತಾಪಿಸಿದರು. ಉಪನ್ಯಾಸಕಿ ನಮಿತಾ ವಂದಿಸಿದರು. ಉಪನ್ಯಾಸಕರಾದ ವಸಂತಿ ನಿರೂಪಿಸಿ, ಗೀತಾ ಪುಷ್ಪ ನೀಡಿ ಗೌರವಿಸಿದರು. ಎಲ್ಲಾ ಸಿಬ್ಬಂದಿ ವರ್ಗದವರು ಸಹಕರಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು.

p>

LEAVE A REPLY

Please enter your comment!
Please enter your name here