ಬೆಳ್ತಂಗಡಿ: ದೇಶದ ಪ್ರಥಮ ಮಹಿಳಾ ಪ್ರಧಾನಿ, ಭೂಸುಧಾರಣಾ ಕಾಯ್ದೆಯ ರೂವಾರಿ ಇಂದಿರಾ ಗಾಂಧಿಯವರ ಜನ್ಮದಿನಾಚರಣೆಯನ್ನು ಅತ್ಯಂತ ವಿಶೇಷವಾಗಿ ಸುದೆಮುಗೇರು ಅನುಗ್ರಹ ವೃದ್ಧಾಶ್ರಮದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಣೆ ನಡೆಸಲಾಯಿತು.
ಬೆಳ್ತಂಗಡಿ ಬ್ಲಾಕ್ ಮಹಿಳಾ ಕಾಂಗ್ರೆಸ್ ನ ನಗರ ಮತ್ತು ಗ್ರಾಮೀಣ ಸಮಿತಿಗಳ ಜಂಟಿ ಆಶ್ರಯದಲ್ಲಿ ಈ ವಿಶೇಷ ಕಾರ್ಯಕ್ರಮ ನಡೆಯಿತು. ವೃದ್ಧಾಶ್ರಮ ನಿವಾಸಿಗಳಿಗೆ ಹಣ್ಣುಹಂಪಲು ಹಾಗೂ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳಿದ್ದರೂ ಅನಾಥಶ್ರಮ ಸೇರಿರುವ ನಿವಾಸಿಗಳು ತಮ್ಮ ದುಃಖ, ಸಂತೋಷವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಪಂಚಾಯತ್ ನ ಮಾಜಿ ಅಧ್ಯಕ್ಷೆ ತನುಜಾ ಶೇಖರ್, ಮಾಜಿ ತಾ.ಪಂ ಸದಸ್ಯೆಯರಾದ ಕೇಶವತಿ, ಸುಶೀಲಾ, ಜಯಶೀಲ, ಮಹಿಳಾ ನಗರ ಘಟಕದ ಅಧ್ಯಕ್ಷೆ ವಂದನಾ ಭಂಡಾರಿ, ಬಾರ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಶರತ್, ಕಳಿಯ ಪಂಚಾಯತ್ ಸದಸ್ಯರಾದ ಮರೀಟಾ ಪಿಂಟೊ, ಶ್ವೇತಾ, ಮೋಹಿನಿ ಮಾಲಾಡಿ ಪಂಚಾಯತ್ ಸದಸ್ಯ ಸೆಬೆಸ್ಟೀನ್ ಡಿಸೋಜ, ವಿದ್ಯಾ, ರುಬೀನಾ, ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯೆ ಸವಿತಾ ಕೊರಗ ಅಟ್ರಿಂಜೆ, ಕಾಂಗ್ರೆಸ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸೌಮ್ಯ ಲಾಯಿಲ, ಮಹಿಳಾ ಘಟಕದ ಪದಾಧಿಕಾರಿಗಳಾದ ಮಧುರ, ಸುಪ್ರೀಯಾ, ಪ್ರಮೀಳಾ, ನೇಹಾ, ವೃದ್ಧಾಶ್ರಮದ ಮುಖ್ಯಸ್ಥೆ ಸಿಸ್ಟರ್ ಪಾವನಾ ಉಪಸ್ಥಿತರಿದ್ದರು.