ಗ್ರಾಮ ಪಂಚಾಯಿತಿ ನೌಕರರ ಶ್ರೇಯ ಅಭಿವೃದ್ಧಿ ಸಂಘ ದ ಜಿಲ್ಲಾಧ್ಯಕ್ಷರಾಗಿ ಸತೀಶ್ ನಾರಾವಿ ಆಯ್ಕೆ

0

ಬೆಳ್ತಂಗಡಿ: ಗ್ರಾಮ ಪಂಚಾಯತ್ ನೌಕರ ಶ್ರೇಯಅಭಿವೃದ್ಧಿ ಸಂಘದ ಜಿಲ್ಲಾ ಸಮಿತಿ ಸಭೆಯು ನ. 17ರಂದು ಬಂಟ್ವಾಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ರಾಜ್ಯಾಧ್ಯಕ್ಷ ದೇವಿ ಪ್ರಸಾದ್ ಬೊಲ್ಮ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಕುಲಾಲ್ ಆಯ್ಕೆ ಮಾಡುವ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಜಿಲ್ಲಾಧ್ಯಕ್ಷರಾಗಿ ಸತೀಶ್ ನಾರಾವಿ, ಉಪಾಧ್ಯಕ್ಷರಾಗಿ ಪ್ರಿಯ ಪಿಂಟೊ ವಾಲ್ಪಾಡಿ, ಶ್ರೀನಿವಾಸ ಉಪ್ಪಿನಂಗಡಿ, ಲಕ್ಷ್ಮಣ ಮಂಗಳೂರು, ತಾರನಾಥ ಕಡಬ, ತೀರ್ಥರಾಮ ಸುಳ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಸಲಾಂ, ಕಾರ್ಯದರ್ಶಿಯಾಗಿ ಹರೀಶ್ ಕಡೆ ಶಿವಾಲಯ, ಸತ್ಯ ಪ್ರಕಾಶ್ ಪುನಾಚ ಮತ್ತು ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ತಾಲೂಕು ಅಧ್ಯಕ್ಷರು ಪದಾಧಿಕಾರಿಗಳು ಸಿಬ್ಬಂದಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

p>

LEAVE A REPLY

Please enter your comment!
Please enter your name here