ಬೆಳ್ತಂಗಡಿ: ಬೆಳ್ತಂಗಡಿಯ ಲಾಯಿಲದಲ್ಲಿರುವ ದಯಾ ವಿಶೇಷ ಶಾಲೆಯ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಜಿಲ್ಲಾ ಪ್ರಶಸ್ತಿ ನೀಡಲಾಗಿದ್ದು, ಶಾಲೆಯ ಸಂಚಾಲಕ ವಂ.ಫಾ.ವಿನೋದ್ ಮಸ್ಕರೇನಸ್ ಪ್ರಶಸ್ತಿ ಸ್ವೀಕರಿಸಿದರು. ಶಾಲೆಯಲ್ಲಿ 150ಕ್ಕೂ ಹೆಚ್ಚು ಮಕ್ಕಳಿದ್ದು, ವಾಕ್ ಮತ್ತು ಶ್ರವಣ ಚಿಕಿತ್ಸೆ, ಭೌತ ಚಿಕಿತ್ಸೆ, ವೈದ್ಯಕೀಯ ಚಿಕಿತ್ಸೆ, ನೈರ್ಮಲ್ಯ ತರಬೇತಿ, ಕೌಶಲ್ಯ ತರಬೇತಿ ಮತ್ತು ಪೌಷ್ಟಿಕ ಆಹಾರವನ್ನು ಪ್ರತಿನಿತ್ಯವೂ ಆಡಳಿತ ಮಂಡಳಿಯು ಉಚಿತವಾಗಿ ಒದಗಿಸುತ್ತಿದೆ. ಈ ವಿಶೇಷ ಚೇತನರು ದೈಹಿಕ, ಮಾನಸಿಕ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಕಾಣುತ್ತಿದ್ದು, ವಿವಿಧ ದಾನಿಗಳು ಸಹಾಯಹಸ್ತ ನೀಡುತ್ತಿದ್ದಾರೆ ಎಂದು ಸಹ ನಿರ್ದೇಶಕ ವಂ.ಫಾ.ರೋಹನ್ ಲೋಬೊ ತಿಳಿಸಿದ್ದಾರೆ.