ಕಾಶಿಪಟ್ಣ: ದಾರುನ್ನೂರ್ ಎಜುಕೇಶನ್ ಸೆಂಟರ್ ದಶಮಾನೋತ್ಸವ ಪ್ರಯುಕ್ತ ಸೌಹಾರ್ದ ಸ್ನೇಹ ಸಂಗಮ- ಸೌಹಾರ್ದತೆಯ ಬದುಕಿಗೆ ಪೂರ್ವಜರೇ ಆದರ್ಶ: ಡಾ. ಎಂ. ಮೋಹನ್ ಆಳ್ವ

0

ಬೆಳ್ತಂಗಡಿ: ನಮ್ಮ ಪೂರ್ವಜರು ನಮಗೆ ಒಂದೊಂದು ಧರ್ಮದ ಹಾದಿಯನ್ನು ತೋರಿಸಿಕೊಟ್ಟಿದ್ದಾರೆಯೇ ಹೊರತು ಪರಸ್ಪರ ಧ್ವೇಷಿಸುವಂತೆ ಹೇಳಿಲ್ಲ. ಎಲ್ಲರೂ ಅವರವರ ಧರ್ಮದ ಜೊತೆಗೆ ಸೌಹಾರ್ದ ಬದುಕಿನ ಹಾದಿಯನ್ನಷ್ಟೇ ತೋರಿಸಿದ್ದಾರೆ. ನಮ್ಮ ಪೂರ್ವಜರು ತೋರಿಸಿದ ಹಾದಿಯಲ್ಲೇ ನಮ್ಮ ಧರ್ಮದ ಸಾರವನ್ನು ಅರಿತುಕೊಂಡು ಸೌಹಾರ್ದ ಜೀವನ ನಡೆಸಬೇಕು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ. ಎಂ. ಮೋಹನ ಆಳ್ವ ಹೇಳಿದರು.

ಅವರು ಕಾಶಿಪಟ್ಣ ದಾರುನ್ನೂರ್ ಎಜುಕೇಶನ್ ಸೆಂಟರ್ ನ ದಶಮಾನೋತ್ಸವ ಪ್ರಯುಕ್ತ ನ.3ರಂದು ನಡೆದ ಸೌಹಾರ್ದ ಸ್ನೇಹ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾರಂಭದಲ್ಲಿ ಹಿರಿಯರಾದ ಪಿ.ಕೆ. ರಾಜು ಪೂಜಾರಿ, ಕಾಶಿಪಟ್ಣ ಪಂಚಾಯತ್ ಅಧ್ಯಕ್ಷ ಸತೀಶ್ ಕೆ., ಪ್ರವೀಣ್ ಪಿಂಟೊ, ಎಸ್‌ಕೆಎಸ್ಸೆಸ್ಸೆಫ್ ಮಾಜಿ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ತನ್ಝೀಮ್ ಸಂಸ್ಥೆಯ ಮುಖ್ಯಸ್ಥ ಇನಾಯತ್ ಆಲಿ, ಮಂಗಳೂರು ಮಾಜಿ ಮೇಯರ್ ಕೆ.ಅಶ್ರಫ್, ವಕ್ಫ್ ಸಕಹಾ ಸಮಿತಿ ಜಿಲ್ಲಾ ಮಾಜಿ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ, ಯೆನಪೋಯ ಸಮೂಹ ಸಂಸ್ಥೆಗಳ ಜಾವೆದ್ ಯೆನಪೋಯ, ನಿವೃತ್ತ ಪೊಲೀಸ್ ಅಧಿಕಾರಿ ಜಿ‌.ಎ.ಬಾವಾ, ಹನೀಫ್ ಹಾಜಿ, ಸಮದ್ ಹಾಜಿ, ಅದ್ದು ಹಾಜಿ, ಶರೀಫ್ ಹಾಜಿ ವೈಟ್ ಸ್ಟೋನ್, ವಕ್ಫ್ ಜಿಲ್ಲಾ ಉಪಾಧ್ಯಕ್ಷ ಫಕೀರಬ್ಬ ಮಾಸ್ಟರ್ ಮರೋಡಿ, ಡಿ.ಎ. ಉಸ್ಮಾನ್ ಹಾಜಿ, ಅಬ್ದುಸ್ಸಲಾಮ್ ಬೂಟ್ ಬಝಾರ್, ಅಬೂಬಕ್ಕರ್ ಮರೋಡಿ, ಹವ್ಯಾಸಿ ಪತ್ರಕರ್ತ ಎಚ್. ಮುಹಮ್ಮದ್ ವೇಣೂರು, ಅಮೀನ್ ಹುದವಿ, ಹುಸೈನ್ ರಹ್ಮಾನಿ ಮತ್ತಿತರರು ಉಪಸ್ಥಿತರಿದ್ದರು.

ನೌಫಲ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಸ್ವಾಗತ ಸಮಿತಿ ವೈಸ್ ಚೇರ್ಮನ್, ಮುಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಹಾಜಿ ಕೋಡಿಜಾಲ್ ಸ್ವಾಗತಿಸಿದರು. ಕೋಶಾಧಿಕಾರಿ ಉಸ್ಮಾನ್ ಹಾಜಿ ಏರ್ ಇಂಡಿಯಾ ವಂದಿಸಿದರು.

LEAVE A REPLY

Please enter your comment!
Please enter your name here