ವೇಣೂರಿನಲ್ಲಿ ದೀಪಾವಳಿ ಪ್ರಯುಕ್ತ ದೋಸೆ ಹಬ್ಬಹಾಗೂ ಗೂಡುದೀಪ, ರಂಗೋಲಿ ಸ್ಪರ್ಧೆ

0

ವೇಣೂರು: ಶ್ರೀ ಶಾರದಾ ಸೇವಾ ಟ್ರಸ್ಟ್ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವೇಣೂರು ,ಲಯನ್ಸ್ ಕ್ಲಬ್ ವೇಣೂರು ಹಾಗೂ ಪದ್ಮಾಂಬಾ ಕ್ಯಾಟರ್ಸ್ ಅಳದಂಗಡಿ ಇವರ ಸಹಭಾಗಿತ್ವದಲ್ಲಿ ದೀಪಾವಳಿ ಪ್ರಯುಕ್ತ ದೋಸೆ ಹಬ್ಬ, ಗೂಡುದೀಪ ಹಾಗೂ ರಂಗೋಲಿ ಸ್ಪರ್ಧೆ ನ.1ರಂದು ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಜರಗಿತು.

ಬೆಳಾಲು ಆರಿಕೋಡಿ ಚಾಮುಂಡೇಶ್ವರ ಕ್ಷೇತ್ರದ ಧರ್ಮದರ್ಶಿ ಹರೀಶ್ ಅರಿಕೊಡಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಸಾಯಿ ಈಶ್ವರ್ ಗುರೂಜಿ ಏಕಜಾತಿ ಧರ್ಮಪೀಠ ದ್ವಾರಕಾಮಯಿ ಮಠ ಶಂಕರಪುರ ಉಡುಪಿ ಆಶೀರ್ವಚನಾ ನೀಡುತ್ತಾ”ಇಂತಹ ಕಾರ್ಯಕ್ರಮಗಳಿಂದ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯ ಪರಂಪರೆ ಜೀವಂತವಾಗಿರುದಲ್ಲದೆ, ಬೆಳಕಿನ ಹಬ್ಬ ದೀಪಾವಳಿಯಿಂದ ಕಹಿಗಳನ್ನು ಮರೆತು ಕತ್ತಲೆಯಿಂದ ಬೆಳಕಿಗೆ ಬರುವ ಅಪೂರ್ವ ದಿನ ಮತ್ತು ದಕ್ಷಿಣದಲ್ಲಿ ಶ್ರೀ ಕೃಷ್ಣಾ ಹೆಸರಲ್ಲಿ ಉತ್ತರದಲ್ಲಿ ಶ್ರೀ ರಾಮನ ಹೆಸರಲ್ಲಿ ದೀಪಾವಳಿಯನ್ನು ಶ್ರದ್ದೆ, ಭಕ್ತಿಯಿಂದ ಆಚರಿಸುತ್ತಾರೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇಣೂರು ಲಯನ್ಸ್ ಕ್ಲಬ್ ಅಧ್ಯಕ್ಷ ಹರೀಶ್ ಪೊಕ್ಕಿ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ವೇಣೂರು ಗ್ರಾ. ಪ. ಅಧ್ಯಕ್ಷೆ ಮಲ್ಲಿಕಾ ಹೆಗ್ಡೆ, ಬೆಳ್ತಂಗಡಿ ಬೆಸ್ಟ್ ಪೌಂದೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ದೇವಸ್ಥಾನದ ಸಮಿತಿಯ ಮಾಜಿ ಅಧ್ಯಕ್ಷ ಜಯರಾಮ್ ಶೆಟ್ಟಿ ಖಂಡಿಗ, ಲಯನ್ಸ್ ಕಾರ್ಯದರ್ಶಿ ಜಯರಾಮ ಹೆಗ್ಡೆ, ಶಾರದಾ ಟ್ರಸ್ಟ್ ಕಾರ್ಯದರ್ಶಿ ಅರವಿಂದ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಮುಖರಾದ ದೇಜಪ್ಪ ಶೆಟ್ಟಿ, ಬಾಲಕೃಷ್ಣ ಭಟ್, ದಯಾನಂದ ದೇವಾಡಿಗ ಅಲಂತಿಯಾರ್ , ಗಣೇಶ್ ದೇವಾಡಿಗ,ದಯಾನಂದ ಬೆಳಾಲು ,ಶ್ರೀಧರ್ ಶೆಟ್ಟಿ , ಶಶಿಧರ್ ಶೆಟ್ಟಿ ಮೂಡುಕೋಡಿ ಉಪಸ್ಥಿತರಿದ್ದರು.
ಶಾರದಾ ಪೀಠವನ್ನು ಉಚಿತವಾಗಿ ಒದಗಿಸಿದ್ದ ವೀರಮ್ಮ ಸಂಜೀವ ಸಾಲ್ಯಾನ್ ಡೊಂಕಬೆಟ್ಟು ಇವರನ್ನು ಗುರೂಜಿಯವರು ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿದರು.

ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಶಾರದಾ ಟ್ರಸ್ಟ್ ಅಧ್ಯಕ್ಷ ಧರಣೇಂದ್ರ ಕುಮಾರ್ ಪ್ರಸ್ತಾವನೆ ಮಾಡಿ ಸ್ವಾಗಿತಿಸಿದರು. ರಮೇಶ್ ಪೂಜಾರಿ ಪಡ್ದಾಯಿ ಮಜಲು ವಂದಿಸಿದರು . ಸತೀಶ್ ವೇಣೂರು ಹಾಗು ಸತೀಶ್ ಹೆಗ್ಡೆ ಬಜಿರೆ ಕಾರ್ಯಕ್ರಮ ನಿರ್ವಹಿಸಿದರು.

p>

LEAVE A REPLY

Please enter your comment!
Please enter your name here