ಅಳದಂಗಡಿ: ನಾರಾವಿ ವಲಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಥಮಿಕ ವಿಭಾಗದ ಬಾಲಕರು ಕ್ರೀಡಾ ಚಾಂಪಿಯನ್ ಶಿಪ್ ತಮ್ಮದಾಗಿಸಿದ್ದಾರೆ. ನಾರಾವಿ ವಲಯದ ಕ್ರೀಡಾಕೂಟ ಬಳಂಜ ಸ. ಉ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಕ್ರೀಡಾಂಗಣದಲ್ಲಿ ಅ.23 ರಂದು ನಡೆಯಿತು.
ಈ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಸೈಂಟ್ ಪೀಟರ್ ಶಾಲೆಯ ವಿದ್ಯಾರ್ಥಿಗಳು ಹಲವು ಬಹುಮಾನಗಳನ್ನು ಪಡೆದುಕೊಂಡಿದ್ದು 600ಮೀ. ಓಟದಲ್ಲಿ ವೈಷ್ಣವಿ ಪ್ರಥಮ, ಲೆನ್ವಿಟಾ ದ್ವಿತೀಯ, ಎತ್ತರ ಜಿಗಿತದಲ್ಲಿ ಚೇತನ್ ದ್ವಿತೀಯ, 600ಮೀ. ಓಟ ಹಾಗೂ ಎತ್ತರ ಜಿಗಿತದಲ್ಲಿ ಶ್ರೇಯಾ ಪ್ರಥಮ, 100ಮೀ. ಓಟದಲ್ಲಿ ಹನಾನ್ ಪ್ರಥಮ, ಚೇತನ್ ತೃತೀಯ, 100ಮೀ. ಓಟದಲ್ಲಿ ಅಪೇಕ್ಷಾ ದ್ವಿತೀಯಾ, 400ಮೀ. ಓಟದಲ್ಲಿ ಲೆನ್ವಿಟಾ ದ್ವಿತೀಯ, ಉದ್ದ ಜಿಗಿತದಲ್ಲಿ ಅಪೇಕ್ಷಾ ತೃತೀಯ, 400ಮೀ. ಓಟದಲ್ಲಿ ಶ್ರೇಯಾ ದ್ವಿತೀಯ, ಹಾರ್ಥಿಕಾ ತೃತೀಯ, 200ಮೀ. ಓಟದಲ್ಲಿ ವಿಯೋನಾ ಪ್ರಥಮ, ಉದ್ದ ಜಿಗಿತದಲ್ಲಿ ಹಾರ್ಥಿಕಾ ಪ್ರಥಮ, 200ಮೀ. ಓಟದಲ್ಲಿ ಚೇತನ್ ಪ್ರಥಮ, ಚಕ್ರ ಎಸೆತದಲ್ಲಿ ಷಡ್ಜಶ್ರೀ ದ್ವಿತೀಯ ಸ್ಥಾನ ಮತ್ತು ರಿಲೇಯಲ್ಲಿ ಬಾಲಕರ ಹಾಗೂ ಬಾಲಕಿಯರ ತಂಡ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ಕೇವನ್ ತರಬೇತಿ ನೀಡಿರುತ್ತಾರೆ.