ಬೆಳ್ತಂಗಡಿ: ಬೆಳ್ತಂಗಡಿ ಶಾಂತಿಶ್ರೀ ಜೈನ್ ಮಹಿಳಾ ಸಮಾಜದ ವತಿಯಿಂದ ಅ.20ರಂದು ಬೆಳ್ತಂಗಡಿ ಶ್ರೀ ಧ. ಮಂ. ಕಲಾಭವನದ ‘ಪಿನಾಕಿ ಹಾಲ್ ‘ನಲ್ಲಿ ಕಂದ ಮೂಲರಹಿತ ಆಹಾರೋತ್ಸವವನ್ನು ಮಹಿಳಾ ಸಮಾಜದ ವತಿಯಿಂದ ನಡೆಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಸನ್ನ ಆರ್. ಹೆಗ್ಡೆ ದೀಪ ಬೆಳಗುವ ಮೂಲಕ ಉದ್ಘಾಟಿಸಿ, ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಭಾರತೀಯ ಜೈನ್ ಮಿಲನ್ ಅಧ್ಯಕ್ಷ ವೀರ್ ನವೀನ್ ಕುಮಾರ್ ಜೈನ್ ಮನೆಗಳಲ್ಲಿ ಶುದ್ಧವಾದ ಪೌಷ್ಟಿಕಾಂಶ ಭರಿತ, ಸಾಂಪ್ರದಾಯಿಕ ಆಹಾರಗಳನ್ನು ತಯಾರಿಸುವಲ್ಲಿ ಅಮ್ಮಂದಿರ ಪಾತ್ರ ಹಿರಿದಾದುದು. ಜೈನ ಆಹಾರ ಪದ್ಧತಿಗಳು ವೈಜ್ಞಾನಿಕವಾಗಿಯೂ ದೃಢೀಕರಿಸಲ್ಪಟ್ಟಿದೆ, ನವೆಂಬರ್ ತಿಂಗಳಲ್ಲಿ ನಡೆಯಲಿರುವ ವಲಯ ಮಟ್ಟದ ಜಿನಭಜನೆ ಕಾರ್ಯಕ್ರಮದ ಮಾಹಿತಿಯನ್ನು ನೀಡಿದರು.
ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಪ್ರೊ. ತ್ರಿಶಲಾ ಜೈನ್ ಕೆ. ಎಸ್. ಕಂದ ಮೂಲರಹಿತ ಆಹಾರ ಮಹತ್ವದ ಬಗ್ಗೆ ತಿಳಿಸುತ್ತಾ, ಆಹಾರದ ವಿಧಗಳಾದ ರಾಜಸ ಆಹಾರ, ತಾಮಸ ಆಹಾರ ಮತ್ತು ಸಾತ್ವಿಕ ಆಹಾರದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. 30 ಬಗೆಯ ವಿವಿಧ ಕಂದ ಮೂಲರಹಿತ ಖಾದ್ಯಗಳನ್ನು ತಯಾರಿಸಿ ತಂದಿರುವ ಸದಸ್ಯೆಯರನ್ನು ಅಭಿನಂದಿಸಿದರು.
ವೈಶಾಲಿ ಬಲ್ಲಾಳ್ ಮಂಗಳೂರು ಅತಿಥಿಗಳನ್ನು ಗೌರವಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸುಷ್ಮಾ ಮತ್ತು ಬಳಗದವರು ಪ್ರಾರ್ಥನೆ ಹಾಡಿದರು. ಕಾರ್ಯದರ್ಶಿ ರಾಜಶ್ರೀ ಎಸ್. ಹೆಗ್ಡೆ ಸ್ವಾಗತಿಸಿ, ಅನುಪಮಾ ಡಿ. ಜೈನ್ ಸಹಕರಿಸಿದರು. ಸಾರಿಕಾ ವಂದಿಸಿ, ಧವಳಾ ಕಾರ್ಯಕ್ರಮವನ್ನು ನಿರೂಪಿಸಿದರು.