ತಣ್ಣೀರುಪಂತ: ಸುಗಮ ಸಂಜೀವಿನಿ ಮಹಿಳಾ ಒಕ್ಕೂಟ ವತಿಯಿಂದ ಶ್ರಮದಾನ

0

ತಣ್ಣೀರಪುಂತ: ತಣ್ಣೀರುಪಂತ ಸುಗಮ ಸಂಜೀವಿನಿ ಮಹಿಳಾ ಒಕ್ಕೂಟ ವತಿಯಿಂದ ನಮ್ಮ ನಡೆ ಸ್ವಚ್ಛ ಸಂಕೀರ್ಣ ಘಟಕದ ಕಡೆ ಎಂಬ ಧ್ಯೇಯದೊಂದಿಗೆ ಶ್ರಮದಾನ ಕಾರ್ಯ ಅ.5ರಂದು ನಡೆಯಿತು.

ಸ್ವಚ್ಛತಾ ಘಟಕದ ಸುತ್ತಲೂ ಸ್ವಚ್ಛ ಗೊಳಿಸಿ ತೆಂಗಿನಗಿಡ, ಬಾಳೆ ಗಿಡ, ಹಾಗೂ ವಿವಿಧ ತರಕಾರಿ ಬೀಜ ಬಿತ್ತಣೆ ಮಾಡಲಾಯಿತು. ಗ್ರಾಮ ವ್ಯಾಪ್ತಿಯಲ್ಲಿರುವ ಎಲ್ಲಾ ಕಸವನ್ನು ತಂದು ಬೇರ್ಪಡಿಸಿ ವ್ಯವಸ್ಥಿತ ರೀತಿಯಲ್ಲಿ ನಿರ್ವಹಣೆ ಮಾಡುತಿದ್ದರೂ ಕೂಡಾ ಸ್ವಚ್ಛ ಘಟಕದ ಸುತ್ತ ಮುತ್ತ ಹುಲ್ಲು, ಪೊದೆಗಳು ಬೆಳೆದಿತ್ತು.

ಈ ಬಗ್ಗೆ ಒಕ್ಕೂಟ ಸಭೆಯಲ್ಲಿ ಚರ್ಚಿಸಿ ಒಕ್ಕೂಟ ಹಾಗೂ ಗುಂಪಿನ ಸದಸ್ಯರು ಸೇರಿಕೊಂಡು ಒಂದು ದಿನದ ಶ್ರಮದಾನ ಕಾರ್ಯ ಮಾಡುವುದಾಗಿ ತೀರ್ಮಾನ ಮಾಡಲಾಯಿತು. ಸ್ವಚ್ಛ ಘಟಕದಲ್ಲೇ ಬೆಳಗ್ಗಿನ ಉಪಹಾರ ಹಾಗು ಊಟ ತಯಾರಿಸಿ ಸ್ವಚ್ಛತೆಯ ಅರಿವನ್ನು ಮೂಡಿಸುವ ಕಾರ್ಯ ಸ್ಪೂರ್ತಿ ದಾಯಕ ಎಂದು ವಲಯ ಮೇಲ್ವಿಚಾರಕ ಸ್ವಸ್ತಿಕ್ ಜೈನ್ ಮೆಚ್ಚುಗೆ ವ್ಯಕ್ತಪಡಿಸಿದರು.

ಒಕ್ಕೂಟ ಅಧ್ಯಕ್ಷೆ ಸವಿತಾ, ಪದಾಧಿಕಾರಿಗಳು, ಸ್ವಚ್ಛತ ಘಟಕದ ಸಿಬ್ಬಂದಿಗಳು, ಸಂಘದ ಸದಸ್ಯರು, ಎಂಬಿಕೆ, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು, ಕೃಷಿಸಖಿ, ಪಶು ಸಖಿ ಹಾಗೂ ಕೃಷಿ ಉದ್ಯೋಗ ಸಖಿ ಉಪಸ್ಥಿತರಿದ್ದರು. ಸ್ವಚ್ಛತ ಘಟಕದಲ್ಲಿ ಅಡುಗೆ ತಯಾರಿಸಿ ಶ್ರಮದಾನದಲ್ಲಿ ಪಾಲ್ಗೊಂಡವರಿಗೆ ಉಣ ಬಡಿಸಲಾಯಿತು.

LEAVE A REPLY

Please enter your comment!
Please enter your name here