ಪುದುವೆಟ್ಟು: ಮಿಯಾರ್ ಎಂಬಲ್ಲಿ ಮರದಿಂದ ಬಿದ್ದು ಶಿಶಿಲದ ಕಾರೆಗುಡ್ಡೆ ನಿವಾಸಿ ಪ್ರವೀಣ್ ಸಾವು

0

p>

ಪುದುವೆಟ್ಟು ಗ್ರಾಮದ ಮಿಯಾರ್ ಬಳಿ ವ್ಯಕ್ತಿಯೊಬ್ಬರು ಮರದಿಂದ ಬಿದ್ದು ಸಾವನ್ನಪ್ಪಿದ ಘಟನೆ ಇಂದು(ಅ.04) ಸಂಭವಿಸಿದೆ.

ಮೃತ ವ್ಯಕ್ತಿಯನ್ನು ಶಿಶಿಲದ ಕಾರೆಗುಡ್ಡೆ ನಿವಾಸಿ ಪ್ರವೀಣ್ (35 ವರ್ಷ) ಎಂದು ಗುರುತಿಸಲಾಗಿದೆ.ಮಿಯಾ‌ರ್ ಸಮೀಪ ಕೂಲಿ ಕೆಲಸಕ್ಕೆಂದು ಆಗಮಿಸಿದ ಇವರು ಸುಮಾರು 10 ಗಂಟೆಗೆ ಮರದ ರೆಂಬೆ ತೆಗೆಯುತಿದ್ದ ವೇಳೆ ಮರದಲ್ಲೇ ಅಸ್ವಸ್ಥಗೊಂಡು ಕೆಳಗೆ ಬಿದ್ದಿದ್ದಾರೆ.

ಅಲ್ಲಿದ್ದವರು ತಕ್ಷಣ ಇವರನ್ನು ಬೆಳ್ತಂಗಡಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು.ಮೃತರು ವಿವಾಹಿತರಾಗಿದ್ದು ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ತಂದೆ ತಾಯಿಯನ್ನು ಅಗಲಿದ್ದಾರೆ.

p>

LEAVE A REPLY

Please enter your comment!
Please enter your name here