ಸುಲ್ಕೇರಿಮೊಗ್ರು: ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಇದರ ಆಶ್ರಯದಲ್ಲಿ ನಡೆಯುವ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 10ನೇ ವರ್ಷದ ಮೊಸರು ಕುಡಿಕೆ ಉತ್ಸವದಲ್ಲಿ ಕಂಬಳ ಕ್ಷೇತ್ರದಲ್ಲಿ ಸಾಧನೆಗೈದ ದಿ|ಬಾಡ ಪೂಜಾರಿ ಇರುವೈಲು ಪಾಣಿಲ ಇವರ ಕಿಂಗ್ ತಾಟೆ ಕೋಣಕ್ಕೆ ಸನ್ಮಾನ ಕಾರ್ಯಕ್ರಮ, ಮತ್ತು ಸುಲ್ಕೇರಿಮೊಗ್ರುವಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಪ್ರಥಮವಾಗಿ ಆರಂಬಿಸಿದ ಶ್ರೀಧರ ಪೂಜಾರಿಯವರನ್ನು ಸನ್ಮಾನಿಸಲಾಯಿತು. ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಅಸಕ್ತ ಕುಟುಂಬಗಳಿಗೆ ಅಕ್ಕಿ ಹಾಗೂ ಧನಸಹಾಯ ವಿತರಣಾ ಕಾರ್ಯಕ್ರಮ ಜರಗಿತು.
ಈ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸುಲ್ಕೇರಿಮೊಗ್ರು ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ ಅಧ್ಯಕ್ಷ ಸತೀಶ್ ದೇವಾಡಿಗ ಇವರು ವಹಿಸಿದ್ದರು. ವೇದಿಕೆಯಲ್ಲಿ ಉಜಿರೆ ಪಿ.ಡಿ.ಓ ಪ್ರಕಾಶ್ ಶೆಟ್ಟಿ ನೊಚ್ಚ , ಸತೀಶ್ಚಂದ್ರ ಸಾಲ್ಯಾನ್ ಇರುವೈಲು ಪಾಣಿಲ, ಗಣೇಶ್ ನಾರಾಯಣ ಪಂಡಿತ್ ಮೂಡುಕೋಡಿ ವೇಣೂರು, ನಮಿತ ಸದಾನಂದ ಪೂಜಾರಿ, ಮಾಳಿಗೆ ವಿಶಾಲಾಕ್ಷಿ, ಬಿ.ಸಿ ರೋಡು, ಸುಲ್ಕೇರಿಮೊಗ್ರು ನಾರಾಯಣ ಗುರು ಸೇವಾ ಸಂಘ ಅಧ್ಯಕ್ಷ ಸಂಕೇತ್ ಬಂಗೇರ, ಸತೀಶ್ ಕುಮಾರ್, ನಮನ ಡಾಬ, ನಾರಾಯಣ ಪೂಜಾರಿ ಪರಂಟ್ಯಾಲ, ಅಳದಂಗಡಿ ಹಾಲು ಉತ್ಪಾದಕರ ಸಂಘದ ಉಪಾದ್ಯಕ್ಷ ಅಶೋಕ್ ಉಪಸ್ಥಿತರಿದ್ದರು.
ಸಮೀಕ್ಷಾ ಶಿರ್ಲಾಲು ಕಾರ್ಯಕ್ರಮವನ್ನು ನಿರೂಪಿಸಿ, ನಂದನ್ ಕುಮಾರ್ ಸ್ವಾಗತಿಸಿ ಸತೀಶ್ ಎಸ್.ಎಂ. ಧನ್ಯವಾದವಿತ್ತರು.