ಪಡಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪ್ರಾರಂಭಿಸುವಾಗ ತಾಲೂಕಿನ ಸ್ಥಿತಿ ಗತಿಗಳನ್ನ ಅವಲೋಕನ ಮಾಡಿಕೊಳ್ಳುವ ಸಂದರ್ಭ ಬಂದಿದೆ.ತಾಲೂಕಿನ ಜನರಿಗೆ ತಮ್ಮ ಜೀವನವನ್ನ ಕಟ್ಟಿಕೊಳ್ಳಲು ಬೇಕಾದ ಶಕ್ತಿಯನ್ನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನೀಡಿದೆ ಜೀವನಕ್ಕೆ ಬೇಕಾದ ಅರ್ಥಿಕ ಸಹಕಾರ, ವಿದ್ಯಾಭ್ಯಾಸಕ್ಕೆ ಬೇಕಾದ ಸುಜ್ಞಾನ ನಿಧಿ ಶಿಷ್ಯ ವೇತನ, ಮೂಲ ಸೌಕರ್ಯ ಅಭಿವೃದ್ಧಿಗೆ ಪೂರಕವಾದ ಮನೆ ರಚನೆಗೆ ಸಹಕಾರ, ಅನಾರೋಗ್ಯ ಪೀಡಿತರಿಗೆ ಆರೋಗ್ಯದ ಸಂಕಲ್ಪಕ್ಕೆ ಸಂಪೂರ್ಣ ಸುರಕ್ಷಾ, ಆರ್ಥಿಕ ಭದ್ರತೆಯ ಕ್ರೋಢೀಕರಣಕ್ಕೆ ಒದ್ದಾಟ ಮಾಡುತ್ತಿದ್ದ ಬಡ ಜನರಿಗೆ ಆರ್ಥಿಕ ಸಬಲೀಕರಣವನ್ನು ಕಲ್ಪಿಸಿ ಸ್ವಾವಲಂಬನೆಯ ಬದುಕನ್ನು ಪ್ರಗತಿ ಬಂಧು ಸ್ವಸಹಾಯ ಸಂಘಗಳು ಒದಗಿಸಿದೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ಗರ್ಡಾಡಿ ವಲಯದ ಪಡಂಗಡಿ ಸಮೃದ್ಧಿ ಸಭಾಭವನದಲ್ಲಿ ಆಯೋಜಿಸಲಾದ ಪಡಂಗಡಿ ಹಾಗು ಕನ್ನಡಿಕಟ್ಟೆ ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ನೂತನವಾಗಿ ರಚನೆಯಾದ ಒಕ್ಕೂಟಗಳ ಪದಾಧಿಕಾರಿಗಳಿಗೆ ನಾಯಕತ್ವ ಗುಣವನ್ನು ಬೆಳೆಸಿಕೊಂಡು ಕಾರ್ಯ ನಿರ್ವಹಿಸಬೇಕೆಂದು ಶುಭ ಹಾರೈಸಿದರು.ಸಾಧಕರಿಗೆ ಸನ್ಮಾನ ನೆರವೇರಿಸಿ ಮಾತನಾಡಿದ ಉಡುಪಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ ಯೋಜನೆಯ ಮೂಲ ಉದ್ದೇಶ ಸೇವೆ ಮತ್ತು ಪರಿಕಲ್ಪನೆ ಸತ್ಯ ಎಂದರೆ ಕಷ್ಟದಲ್ಲಿ ಇರುವ ವ್ಯಕ್ತಿಗೆ ಸಹಕಾರ ನೀಡುವುದು ದುಶ್ಚಟಗಳ ವಿರುದ್ಧ, ಮೂಡನಂಬಿಕೆಗಳ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುತ್ತಿದೆ, ವಿವಿಧ ರೀತಿಯಲ್ಲಿ ಬರುವ ಸಮಸ್ಯೆಗಳನ್ನ ನಿಭಾಯಿಸುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಜಾತಿ, ಮತ, ಧರ್ಮ, ರಾಜಕೀಯವನ್ನು ಮೀರಿ ಎಲ್ಲರಿಗೂ ಒಂದೇ ರೀತಿಯ ಕಾರ್ಯಕ್ರಮಗಳನ್ನ ಯೋಜನೆಯು ನೀಡಿದೆ ಸ್ವ ಉದ್ಯೋಗಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ತರಬೇತಿಯನ್ನು ನೀಡಿ ಆರ್ಥಿಕ ಸಹಕಾರವನ್ನು ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಒದಗಿಸಲಾಗುತ್ತಿದೆ ಇದರಿಂದಾಗಿ ಆರ್ಥಿಕ ಪ್ರಗತಿಯ ಮೂಲಕ ಬಡ ಕುಟುಂಬಗಳ ಅಭಿವೃದ್ದಿಗೆ ಸಹಕಾರಿಯಾಗಿದೆ ಎಂದರು.
ದೇವಸ್ಥಾನಗಳ ಅಭಿವೃದ್ದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ದೇಣಿಗೆ, ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಸಂಘ-ಸಂಸ್ಥೆಗಳಿಗೆ, ಶಾಲೆಯ ಅಭಿವೃದ್ಧಿಗೆ, ಸಮುದಾಯ ಭವನಕ್ಕೆ ಅನುದಾನಗಳನ್ನು ಒದಗಿಸಿ ಸಮುದಾಯದ ಸಮಸ್ಯೆಗಳಿಗೆ ಸ್ಪಂದನೆ ನೀಡಲಾಗುತ್ತಿದೆ ಬದುಕಿನಲ್ಲಿ ಕೀಳರಿಮೆ ಇಟ್ಟುಕೊಳ್ಳಬಾರದು ನಮ್ಮ ದೇಶದ ದೊಡ್ಡ ಸಂಪತ್ತು ಮಾನವ ಸಂಪತ್ತು ಅದರ ಸದ್ಬಳಕೆ ಆಗಬೇಕು ನಮ್ಮ ಏಳಿಗೆಯನ್ನು ನಾವೇ ಮಾಡಿಕೊಳ್ಳಬೇಕು ಅಭಿವೃದ್ದಿಗೆ ಪೂರಕವಾದ ಯೋಜನೆಯನ್ನು ಹಾಕಿಕೊಂಡು ನಾವೇ ಅದರ ಅನುಷ್ಟಾನ ಮಾಡಿದ್ದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.ದುಡಿಯುವ ಸಮಯದಲ್ಲಿ ದುಡಿದು ಭವಿಷ್ಯದ ಹಿತ ದೃಷ್ಟಿಯಿಂದ ಉಳಿತಾಯ ಮಾಡಿದರೆ ಮುಂದಿನ ಬದುಕು ನೆಮ್ಮದಿಯಿಂದ ಕೂಡಿರುತ್ತದೆ ಎಂದರು. ಪಡಂಗಡಿ ಗ್ರಾಮ ಪಂಚಾಯತ್ ಸದಸ್ಯ ಸಂತೋಷ್ ಜೈನ್ ಮಾತನಾಡುತ್ತ ಸಮಾಜಕ್ಕೆ ಮಾದರಿಯಾಗಿ ಸಮಾಜಕ್ಕೆ ಸೇವೆ ನೀಡುವ ಕೆಲಸವನ್ನು ಯೋಜನೆ ಮಾಡಿದ ಪರಿಣಾಮ ಸಂತೋಷದಿಂದ ಬದುಕುವ ವಾತಾವರಣ ಪ್ರತಿಯೊಂದೂ ಹಳ್ಳಿಯಲ್ಲಿಯೂ ನಿರ್ಮಾಣವಾಗಿದೆ ಎಂದರು. ರೆ.ಫಾ.ರೋಶನ್ ಕ್ರಾಸ್ತಾ ಧರ್ಮಗುರುಗಳು, ಆಡಳಿತ ಅಧಿಕಾರಿ ಸಂತ ರಫಾಯಲ್ ಚರ್ಚ್ ಫಾ.ಎಲ್.ಎಂ ಪಿಂಟೋ ಬದ್ಯಾರ್ ಆಸ್ಪತ್ರೆ ರವರು ಮಾತನಾಡುತ್ತ ಮನುಷ್ಯನಿಗೆ ಯಾವಾಗ ಕಾಯಿಲೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಇಂಥಹ ಸಂದರ್ಭದಲ್ಲಿ ಕುಟುಂಬ ಸಂದಿಗ್ಧ ಪರಿಸ್ಥಿತಿಗೆ ಒಳಗಾಗುತ್ತದೆ ಪ್ರಗತಿ ಬಂಧು ಸ್ವಸಹಾಯ ಸಂಘಗಳು ಕಷ್ಟ ಕಾಲದಲ್ಲಿ ಸಹಕಾರಿ ಅಗುತ್ತದೆ ಸರ್ವ ಧರ್ಮದ ಸದಸ್ಯರು ಸೇರಿದಾಗ ಮಾತ್ರ ಸಮಗ್ರ ಅಭಿವೃದ್ಧಿ ಆಗುತ್ತದೆ ಎಲ್ಲಾರೂ ತಮ್ಮ ಆರೋಗ್ಯದ ಕಡೆಗೆ ಗಮನ ನೀಡಬೇಕೆಂದು ಮನವರಿಕೆ ಮಾಡಿದರು.
ದುಡಿಯುವ ಸಮಯದಲ್ಲಿ ದುಡಿದು ಭವಿಷ್ಯದ ಹಿತ ದೃಷ್ಟಿಯಿಂದ ಉಳಿತಾಯ ಮಾಡಿದರೆ ಮುಂದಿನ ಬದುಕು ನೆಮ್ಮದಿಯಿಂದ ಕೂಡಿರುತ್ತದೆ ಎಂದರು. ಪಡಂಗಡಿ ಗ್ರಾಮ ಪಂಚಾಯತ್ ಸದಸ್ಯ ಸಂತೋಷ್ ಜೈನ್ ಮಾತನಾಡುತ್ತ ಸಮಾಜಕ್ಕೆ ಮಾದರಿಯಾಗಿ ಸಮಾಜಕ್ಕೆ ಸೇವೆ ನೀಡುವ ಕೆಲಸವನ್ನು ಯೋಜನೆ ಮಾಡಿದ ಪರಿಣಾಮ ಸಂತೋಷದಿಂದ ಬದುಕುವ ವಾತಾವರಣ ಪ್ರತಿಯೊಂದೂ ಹಳ್ಳಿಯಲ್ಲಿಯೂ ನಿರ್ಮಾಣವಾಗಿದೆ ಎಂದರು. ರೆ.ಫಾ.ರೋಶನ್ ಕ್ರಾಸ್ತಾ ಧರ್ಮಗುರುಗಳು, ಆಡಳಿತ ಅಧಿಕಾರಿ ಸಂತ ರಫಾಯಲ್ ಚರ್ಚ್ ಫಾ.ಎಲ್.ಎಂ ಪಿಂಟೋ ಬದ್ಯಾರ್ ಆಸ್ಪತ್ರೆ ರವರು ಮಾತನಾಡುತ್ತ ಮನುಷ್ಯನಿಗೆ ಯಾವಾಗ ಕಾಯಿಲೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಇಂಥಹ ಸಂದರ್ಭದಲ್ಲಿ ಕುಟುಂಬ ಸಂದಿಗ್ಧ ಪರಿಸ್ಥಿತಿಗೆ ಒಳಗಾಗುತ್ತದೆ ಪ್ರಗತಿ ಬಂಧು ಸ್ವಸಹಾಯ ಸಂಘಗಳು ಕಷ್ಟ ಕಾಲದಲ್ಲಿ ಸಹಕಾರಿ ಅಗುತ್ತದೆ ಸರ್ವ ಧರ್ಮದ ಸದಸ್ಯರು ಸೇರಿದಾಗ ಮಾತ್ರ ಸಮಗ್ರ ಅಭಿವೃದ್ಧಿ ಆಗುತ್ತದೆ ಎಲ್ಲಾರೂ ತಮ್ಮ ಆರೋಗ್ಯದ ಕಡೆಗೆ ಗಮನ ನೀಡಬೇಕೆಂದು ಮನವರಿಕೆ ಮಾಡಿದರು.
ವೇದಿಕೆಯಲ್ಲಿ ಪಿ.ಹೆಚ್.ಮುಹಮ್ಮದ್ ಆಶ್ರಫ್ ಧರ್ಮಗುರುಗಳು, ಮೊಹಿದ್ದೀನ್ ಜಮ್ಮಾ ಮಸೀದಿ ಪಡಂಗಡಿ, ಆಂಥೋನಿ ಫೆರ್ನಾಂಡಿಸ್ ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪಡಂಗಡಿ, ದ.ಕ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ನೂತನ ಒಕ್ಕೂಟದ ಅಧ್ಯಕ್ಷ ಸುರೇಶ್ ಪೂಜಾರಿ, ಉಸ್ಮಾನ್, ನಿಕಟ ಪೂರ್ವ ಅಧ್ಯಕ್ಷೆ ವಿನೋದಾ ಉಪಸ್ಥಿತರಿದ್ದರು.
ಸಭಾದ್ಯಕ್ಷತೆಯನ್ನು ಪಡಂಗಡಿ ಗ್ರಾಮ ಪಂಚಾಯತ್ ಅಧ್ಯಕ್ ಪ್ರಶಾಂತ್ ಸುವರ್ಣ ವಹಿಸಿದ್ದರು. ತಾ.ಯೋಜನಾಧಿಕಾರಿ ದಯಾನಂದ ಪೂಜಾರಿ ಸ್ವಾಗತಿಸಿದರು, ಸೇವಾ ಪ್ರತಿನಿಧಿ ರೇಷ್ಮಾ ವರದಿ ಮಂಡಿಸಿದರು ಮೇಲ್ವಿಚಾರಕ ಗುಣಕರ್, ವಸಂತ ನಿರೂಪಿಸಿದರು. ವಲಯ ಮೇಲ್ವಿಚಾರಕಿ ಹೇಮಾವತಿ ವಂದಿಸಿದರು. ಗುರುವಾಯನಕೆರೆ ವಲಯ ಮೇಲ್ವಿಚಾರಕಿ ಯಶೋದಾ, ಕನ್ನಡಿಕಟ್ಟೆ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಸ್ವಾತಿ ಸಹಕರಿಸಿದರು.