ಸರಕಾರದ ಎಂ.ಎಸ್.ಐ.ಎಲ್ ಮದ್ಯದ ಅಂಗಡಿಗೆ ಜನಜಾಗೃತಿ ವೇದಿಕೆ ಮತ್ತು ಗ್ರಾ.ಪಂ. ಮತ್ತು ಗ್ರಾಮಸ್ಥರಿಂದ ತೀವ್ರ ವಿರೋಧ

0

ಬಾರ್ಯ: ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸಂಬಂಧಪಟ್ಟಂತೆ ಪುತ್ತಿಲ, ಮೂರುಗೋಳಿಯಲ್ಲಿ ಸರಕಾರದ ಎಂ.ಎಸ್.ಐ.ಎಲ್ ಮದ್ಯದ ಅಂಗಡಿಯನ್ನು ರಾತೋರಾತ್ರಿ ತೆರೆದಿದ್ದು ಇದನ್ನು ಬಂದ್ ಮಾಡಿಸಿ ಇಲ್ಲಿ ಯಾವುದೇ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಬಾರದೆಂದು ಗ್ರಾಮ ಸಭೆಯಲ್ಲಿ ಸದಸ್ಯರು ಮತ್ತು ಗ್ರಾಮಸ್ಥರು ಕೂಡ ಖಂಡಿಸಿದ್ದು. ತೆರವು ಮಾಡಿಸದೇ ಇದ್ದಲ್ಲಿ ಮುಂದಿನ ದಿನದಲ್ಲಿ ತೀವ್ರ ಹೋರಾಟದ ಬಗ್ಗೆ ಅಬಕಾರಿ ನಿರೀಕ್ಷಕ ಲಕ್ಶ್ಮಣ ಉಪ್ಪಾರ ಇವರಿಗೆ ತಣ್ಣೀರುಪಂತ ವಲಯದ ಜನಜಾಗೃತಿ ವೇದಿಕೆ ಮತ್ತು ಊರವರಿಂದ ಮತ್ತು ಗ್ರಾಮ ಪಂಚಾಯತ್ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ತಣ್ಣೀರುಪಂತ ವಲಯದ ಜನಜಾಗೃತಿ ವೇದಿಕೆ ವಲಯಧ್ಯಕ್ಷ ಪ್ರಭಾಕರ್ ಗೌಡ ಪೋಸೊಂದೋಡಿ, ಜನಜಾಗೃತಿ ವೇದಿಕೆ ತಾಲೋಕು ಕಾರ್ಯಕಾರಿಣಿ ಸದಸ್ಯ ಮೋನಪ್ಪ ಗೌಡ ಮಣಿಲ, ಬಾರ್ಯ ಜನಜಾಗೃತಿ ವೇದಿಕೆ ಗ್ರಾಮ ಸಮಿತಿ ಅಧ್ಯಕ್ಷರು ಮತ್ತು ಪಂಚಾಯತ್ ಸದಸ್ಯ ಬಾಲಕೃಷ್ಣ ಶೆಟ್ಟಿ, ಪುತ್ತಿಲ ಜನಜಾಗೃತಿ ವೇದಿಕೆ ಗ್ರಾಮ ಸಮಿತಿ ಅಧ್ಯಕ್ಷ ಯಾದವ, ಪುತ್ತಿಲ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಉಮೇಶ್, ತಣ್ಣೀರುಪಂಥ ವಲಯದ ಮೇಲ್ವಿಚಾರಕ ಗುಣಕರ್, ಸೇವಾಪ್ರತಿನಿಧಿಗಳಾದ ಶಿವರಾಮ್ ತೆಕ್ಕಾರು, ಗೀತಾ, ಸುನೀತಾ ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here