


ಅರಸಿನಮಕ್ಕಿ: ಅರಸಿನಮಕ್ಕಿ ಕಾರ್ಗಿಲ್ ಕದನದ 25 ವರ್ಷದ ನೆನಪಿಗಾಗಿ ಪ್ರೌಢ ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ಮತ್ತು ಸನ್ಮಾನ ಕಾರ್ಯಕ್ರಮವನ್ನು ಅರಸಿನಮಕ್ಕಿ-ಶಿಶಿಲ ಶೌರ್ಯ ವಿಪತ್ತು ಘಟಕ ಮತ್ತು ಪ್ರೌಢ ಶಾಲಾ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

ಅಂದಿನ ಕಾರ್ಗಿಲ್ ಹೋರಾಟ ದಲ್ಲಿ ತೊಡಗಿಸಿಕೊಂಡ ಶಿಬಾಜೆ ಗ್ರಾಮದ ಪ್ರಸನ್ನ ಬರ್ಗುಳ ಇವರನ್ನು ಸನ್ಮಾನಿಸಲಾಯಿತು. ಸನ್ಮಾನಿತರು ಮಕ್ಕಳೊಂದಿಗೆ ಸಂವಾದ ನಡೆಸಿ ಸೈನಿಕನಾಗ ಬಯಸುವ ಯುವ ಶಕ್ತಿಗೆ ಪ್ರೇರಣೆಯ ಮಾತುಗಳನ್ನಾಡಿದರು. ಹಾಗೆಯೇ ತಾನು ಕಾರ್ಗಿಲ್ ಹೋರಾಟದಲ್ಲಿ ತೊಡಗಿಸಿಕೊಂಡ ಪರಿಯನ್ನು ಮಕ್ಕಳಿಗೆ ತಿಳಿಸಿದರು. ಕಾರ್ಗಿಲ್ ವನ ನಿರ್ಮಿಸಿ ಮೆಚ್ಚುಗೆ ಗಳಿಸಿದ್ದ ಸಚಿನ್ ಭಿಡೆ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.


ವೇದಿಕೆಯಲ್ಲಿ ಮುಖ್ಯೋಪಾಧ್ಯಾಯ ಚಂದ್ರು, ಶಿಬಾಜೆ ಪಂಚಾಯತ್ ಉಪಾಧ್ಯಕ್ಷರಾದ ದಿನಕರ್ ಕುರುಪ್, ರತ್ನಮ್ಮ, ವಲಯ ಮೇಲ್ವಿಚಾರಕಿ ಶಶಿಕಲಾ, ಶೌರ್ಯ ವಿಪತ್ತು ಘಟಕದ ಸಂಯೋಜಕಿ ರಶ್ಮಿತಾ ಶಿಶಿಲ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಚಂದ್ರು ಸ್ವಾಗತಿಸಿ, ಪರಿಚಯ ಮತ್ತು ಪ್ರಾಸ್ಥವಿಕ ನುಡಿಯನ್ನು ಅವಿನಾಶ್ ಭಿಡೆ ನೆರವೇರಿಸಿದರು. ಮಂಜುಳ ನಿರೂಪಿಸಿ, ಚೇತನಾಕ್ಷಿ ಧನ್ಯವಾದಗೈದರು.









