ಮುಂಡಾಜೆ: ಗ್ರಾಮ ಪಂಚಾಯತ್ ನಲ್ಲಿ ಪಿಎಂ ಜನ್ ಮನ್ ಕಾರ್ಯಕ್ರಮ

0

ಮುಂಡಾಜೆ: ಮುಂಡಾಜೆ ಗ್ರಾಮ ಪಂಚಾಯತ್ ನಲ್ಲಿ ಆ.29ರಂದು ಪಿಎಂ ಜನ್ ಮನ್ ಕಾರ್ಯಕ್ರಮ ನಡೆಯಿತು.

ನೈಜ ಬುಡಕಟ್ಟು ಸಮುದಾಯಗಳಿಗೆ ಸರ್ಕಾರದ ಮೂಲಭೂತ ದಾಖಲೆಗಳ ನೋಂದಣಿ ಕಾರ್ಯಕ್ರಮದ ಮಹಾ ಅಭಿಯಾನ-2 ಕಾರ್ಯಕ್ರಮದಲ್ಲಿ ಕೊರಗ ಸಮುದಾಯಕ್ಕೆ ಅವಶ್ಯವಿರುವ ಸರ್ಕಾರಿ ದಾಖಲೆಗಳಾದ ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ ಹಾಗೂ ಅಭಾಕಾರ್ಡ್ ಗಳನ್ನು ಒದಗಿಸಲು ಸೂಕ್ತ ದಾಖಲೆಗಳನ್ನು ಪಡೆಯಲಾಯಿತು.

ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷ ಗಣೇಶ್ ಬಂಗೇರ, ಸದಸ್ಯರಾದ ರಾಮಣ್ಣ ಶೆಟ್ಟಿ, ಮುಂಡಾಜೆ ಕೊರಗ ಸಮುದಾಯದ ಪ್ರತಿನಿಧಿ ಮುಂಡಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹೇಮಚಂದ್ರ
ಮತ್ತು ಮುಂಡಾಜೆ ಗ್ರಾಮದ ಕೊರಗ ಸಮುದಾಯದವರು ಉಪಸ್ಥಿತರಿದ್ದರು.

ಗಿರಿಜನ ಕಲ್ಯಾಣ ವಿಸ್ತರಣಾಧಿಕಾರಿ ಹೇಮಲತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here