ಚಾರ್ಮಾಡಿ: ಗ್ರಾಮ ಪಂಚಾಯತು ವ್ಯಾಪ್ತಿಯ ಕಾಂಜಾಲು ನಿವಾಸಿ ಜೋಸೆಫ್ ಎ.ಎ ಮೇನಾಚೇರಿ ಎಂಬವರ ಪತ್ನಿ ಬ್ರಿಜಿತಾ(86 ವರ್ಷ) ಅಲ್ಪಕಾಲದ ಅಸೌಖ್ಯದ ಬಳಿಕ ನಿಧನರಾಗಿದ್ದಾರೆ.
ಅವರು ಪತಿ ಜೋಸೆಫ್, ಧರ್ಮಸ್ಥಳ ಚರ್ಚಿನ ಧರ್ಮಗುರುಗಳಾದ ಫಾ.ರೋಕಿ ಮೇನಾಚೇರಿ ಸೇರಿದಂತೆ ಆರು ಮಂದಿ ಗಂಡು ಮಕ್ಕಳು ಹಾಗೂ ಇಬ್ಬರು ಧರ್ಮಭಗಿನಿಯರು ಸೇರಿದಂತೆ ನಾಲ್ವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರ ಕಾಂಜಾಲು ಸೈಟ್ ಸೆಬಾಸ್ಟಿಯನ್ ಚರ್ಚ್ ನಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ.ವಂ ಲಾರೆನ್ಸ್ ಮುಕ್ಕುಯಿ ಅವರ ಉಪಸ್ಥಿತಿಯಲ್ಲಿ ನೆರವೇರಿತು.1938ಆ 15ರಂದು ಹುಟ್ಟಿದ ಬ್ರಿಜಿತಾ ಅವರು ಆ.15ರಂದೇ ನಿಧನರಾದುದು ವಿಶೇಷ.
p>