ಬೆಳ್ತಂಗಡಿ: ನೇತಾಜಿ ಸುಭಾಷ್ ಚಂದ್ರಬೋಸ್ ಅವಾಸೀಯ ವಿದ್ಯಾಲಯ ಮುಗುಳಿ ಬೆಳ್ತಂಗಡಿಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್, ರೋಟರಿ ಕ್ಲಬ್ ಬೆಳ್ತಂಗಡಿ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಆಚರಿಸಲಾಯಿತು.
ಧ್ವಜಾರೋಹಣವನ್ನು ಎಸ್.ಕೆ.ಆರ್.ಡಿ.ಪಿ ನಿವೃತ್ತ ಪ್ರಾದೇಶಿಕ ನಿರ್ದೇಶಕ ಜಯಶಂಕರ್ ಶರ್ಮ ನೆರವೇರಿಸಿದರು. ಬಳಿಕ ಉದ್ಯಮಿ ಬಸವರಾಜ್ ಮತ್ತು ಉದ್ಯಮಿ ಮೋಹನ್ ಚೌಧರಿಗೆ ವಿದ್ಯಾರ್ಥಿಗಳಿಂದ ಸನ್ಮಾನಿಸಲಾಯಿತು.100 ವಿದ್ಯಾರ್ಥಿಗಳಿಗೆ ಬ್ಯಾಗ್, ಪೆನ್ಸಿಲ್, ಸ್ಕೇಚ್ ಪೇನ್, ರಬ್ಬರ್, ಪೇನ್ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನಿಂದ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉದ್ಯಮಿ ಬಸವರಾಜ್, ತಾಲೂಕು ಪಂಚಾಯತ್ ಮ್ಯಾನೇಜರ್ ಪ್ರಶಾಂತ್, ಎಸ್.ಕೆ.ಆರ್.ಡಿ.ಪಿ ನಿವೃತ್ತ ಪ್ರಾದೇಶಿಕ ನಿರ್ದೇಶಕ ಜಯಶಂಕರ್ ಶರ್ಮ, ಬೆಳ್ತಂಗಡಿ ರೋಟರಿ ಕಾರ್ಯದರ್ಶಿ ಸಂದೇಶ್, ನಿವೃತ್ತ ಸೈನಿಕ ಕುಲದೀಪ್ ಸಿಂಗ್, ಮುಖ್ಯೋಪಾಧ್ಯಾಯ ವಿಠಲ್ ಬಿ, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾ ಕೇಸರಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಭವನಿ ಶಂಕರ್, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ, ವಿಷ್ಣು ಸೇವಾ ಸಮಾಜ ಮೋಹನ್ ಚೌದರಿ, ಉಜಿರೆ ಸಂಧ್ಯಾ ಫ್ರೇಶ್ ಆಡಳಿತಾಧಿಕಾರಿ ಅರ್ಚನಾ ಪೈ, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರಾದ ಮೋಹನ್ ಕುಮಾರ್ ಮತ್ತು ರಾಜೇಶ್ ಪೈ ಹಾಗೂ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸದಸ್ಯರು ಹಾಗೂ ಉಜಿರೆ ಸಂಧ್ಯಾ ಫ್ರೇಶ್ ಸಿಬ್ಬಂದಿಗಳು, ಶಿಕ್ಷಕ ವೃಂದದವರು ಭಾಗಿಯಾಗಿದ್ದರು.