ಉಜಿರೆ: ಕೂಟ ಮಹಾ ಜಗತ್ತು ಬೆಳ್ತಂಗಡಿ ಅಂಗಸಂಸ್ಥೆಯ ಮಹಿಳಾ ವೇದಿಕೆಯ ವತಿಯಿಂದ ಆ.4ರಂದು ಉಜಿರೆಯ ಅರಿಪ್ಪಾಡಿ ಮಠ ಕಲಾವೇದಿಕೆಯಲ್ಲಿ ಆಟಿಕೂಟ ಕಾರ್ಯಕ್ರಮ ನಡೆಯಿತು.ಬೆಳ್ತಂಗಡಿ ಕೂಟ ಮಹಾ ಜಗತ್ತಿನ ಅಧ್ಯಕ್ಷ ವಿಶ್ವನಾಥ ಹೊಳ್ಳ ದೀಪ ಬೆಳಗಿಸಿ ಆಟಿಕೂಟಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದ ಸಮಾರೋಪ ಸಭೆಯಲ್ಲಿ ಅಧ್ಯಕ್ಷತೆಯನ್ನು ವಿಶ್ವನಾಥ ಹೊಳ್ಳ ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ಜಯಂತಿ ಪುರಂದರ್, ಕೇಂದ್ರ ಖಜಾಂಜಿ ವಾಸುದೇವ ಸೋಮಯಾಜಿ, ಮಹಿಳಾ ವೇದಿಕೆಯ ಅಧ್ಯಕ್ಷೆ ನಳಿನಿ ಹೊಳ್ಳ ಉಪಸ್ಥಿತರಿದ್ದರು. ಆಟಿಕೂಟದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.ಮಹಿಳಾ ವೇದಿಕೆಯ ಸದಸ್ಯೆ ವಿದ್ಯಾಶ್ರೀ ಅಡೂರ್ ಅವರು ಸ್ಪರ್ಧೆಗಳನ್ನು ನಿರ್ವಹಿಸಿದರು.ಮಹಿಳಾ ವೇದಿಕೆಯ ಅನೇಕ ಸದಸ್ಯರು ತುಳುನಾಡಿನ ಖಾದ್ಯಗಳನ್ನು ತಮ್ಮ ತಮ್ಮ ಮನೆಗಳಲ್ಲಿ ತಯಾರಿಸಿ ತಂದು ಕಾರ್ಯಕ್ರಮದಲ್ಲಿ ಹಂಚಿಕೊಂಡು ತಿಂದು ತಿನಿಸಿ ಸಂಭ್ರಮ ಪಟ್ಟರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಗೀತಾ ವಿ ರಾವ್ ಇವರು ಆಟಿಯ ಮಹತ್ವವನ್ನ ವಿವರಿಸಿದರು.ಅಖಿಲ ಪ್ರಕಾಶ್ ನಾರಾಯಣ್ ಇವರು ಖಾದ್ಯಗಳನ್ನು ತಯಾರಿಸಿ ತಂದವರ ಪಟ್ಟಿಯನ್ನು ವಚಿಸಿದರು.ಇಂದಿರಾ ಹೊಳ್ಳ ಪ್ರಾರ್ಧಿಸಿ, ಸುಜಾತ ರಾವ್ ಸ್ವಾಗತಿಸಿ, ಆಶಾ ಅಡೂರ್ ಇವರು ವಂದಿಸಿದರು.ಮಹಿಳಾ ವೇದಿಕೆಯ ಕಾರ್ಯದರ್ಶಿ ಅಕ್ಷತಾ ಅಡೂರ್ ಕಾರ್ಯಕ್ರಮವನ್ನು ನಿರೂಪಿಸಿದರು.