ವೇಣೂರು: ಸರ್ಕಾರಿ ಪ್ರೌಢಶಾಲೆಗೆ ರೂ. 2.50 ಲಕ್ಷ ಆರ್ಥಿಕ ನೆರವು ನೀಡಿದ ಲಂಡನ್ ನಿವಾಸಿ ಮಥಾಯಸ್ ಜಿ.ರೊಡ್ರಿಗಸ್

0

ವೇಣೂರು: ವೇಣೂರಿನ ನಿವಾಸಿ ಪ್ರಸ್ತುತ ಲಂಡನ್ ನಲ್ಲಿ ವಾಸವಾಗಿರುವ ಮಥಾಯಸ್ ಜಿ. ರೊಡ್ರಿಗಸ್ ಅವರು ವೇಣೂರು ಸರಕಾರಿ ಪ್ರೌಢಶಾಲೆಯ ನೂತನ ಕಟ್ಟಡದ ಮೂಲ ಸೌಲಭ್ಯ ಕಲ್ಪಿಸಲು 2,50,000 ರೂ. ಆರ್ಥಿಕ ನೆರವು ನೀಡಿದ್ದಾರೆ.

ಅತೀ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಪಡೆಯುತ್ತಿರುವ ವೇಣೂರು ಸರಕಾರಿ ಪ್ರೌಢಶಾಲೆಗೆ ನೂತನ ಕಟ್ಟಡ ಬೇಕೆಂಬ ಬೇಡಿಕೆ ಈಡೇರಿದೆ. ನೂತನ ಕಟ್ಟಡದಲ್ಲಿ ಮಕ್ಕಳ ಕಲರವವೂ ಆರಂಭವಾಗಿದೆ. ಆದ್ರೆ ಇಲ್ಲಿ ತರಗತಿ ನಡೆಸಲು ಪೂರ್ಣವಾಗಿ ಸೌಲಭ್ಯಗಳೇ ಇರಲಿಲ್ಲ. ಅತೀ ದೊಡ್ಡ ಸವಾಲುಗಳನ್ನು ಎದುರಿಸಿ ಶಿಕ್ಷಕರು ಅನಿವಾರ್ಯವಾಗಿ ನೂತನ ಸ್ಥಳನಂತರ ಮಾಡಿದ್ದರು. ಕೊಠಡಿ, ಶೌಚಾಲಯಗಳು ಸೇರಿದಂತೆ ಸಾಕಷ್ಟು ಮೂಲ ಸೌಲಭ್ಯಗಳ ಕೊರತೆಗಳಿದ್ದವು. ಅದ್ಕೆ ಇಲ್ಲಿಯ ಶಿಕ್ಷಕರು ವಿಶೇಷ ಕಾಳಜಿ ವಹಿಸಿ ಅಭಿವೃದ್ಧಿ ಸಮಿತಿಗಳ ಚರ್ಚಿಸಿ ಶಾಲೆಯ ಹಳೆ ವಿದ್ಯಾರ್ಥಿಗಳ ಮುಂದೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಹಳೆ ವಿದ್ಯಾರ್ಥಿಗಳಿಂದ ಅದ್ಭುತ ಸ್ಪಂದನೆ ದೊರೆತಿದೆ. ನೂರಾರು ವಿದ್ಯಾರ್ಥಿಗಳು ಧನಸಹಾಯ ಮಾಡಿದ್ದಾರೆ, ಮಾಡುತ್ತಿದ್ದಾರೆ.

ರೂ. 2.50 ಲಕ್ಷ ಮೊತ್ತದ ನೆರವು: ಮಥಾಯಸ್ ಜಿ. ರೊಡ್ರಿಗಸ್ ಅವರು ಬೆಳ್ತಂಗಡಿಯ ಸೊಣಂದೂರಿನಲ್ಲಿ ಜನಿಸಿದ ಇವರು ತಮ್ಮ ಶಿಕ್ಷಣವನ್ನು ಕರಿಮಣೇಲು, ವೇಣೂರು ಮತ್ತು ಮೂಡಬಿದರೆಯಲ್ಲಿ ಮಾಡಿದರು. 1958 ರಿಂದ 1963 ರವರೆಗೆ ನಾನಾ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ 1963 ರಿಂದ 1993ರ ವರೆಗೆ Indian Embassy London ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಜೀವನ ನಡೆಸುತ್ತಿದ್ದು ಇದೀಗ ಇವರಿಗೆ 89ರ ಹರೆಯ. ಇವರು ಪತ್ನಿ ಅಲಿಸ್ ರೊಡಿಗಸ್, ಹಾಗೂ ಮೂವರು ಮಕ್ಕಳೊಂದಿಗೆ ಲಂಡನ್ನಲ್ಲಿ ಸುಖಿ ಜೀವನ ನಡೆಸುತ್ತಿದ್ದಾರೆ.

ಹತ್ತು ಹಲವು ಅಭಿವೃದ್ಧಿ ಕಾರ್ಯಗಳಿಗೆ ನೆರವು ನೀಡಿದ ಇವರು ಯಾವುದೇ ಪ್ರಚಾರವನ್ನು ಬಯಸದೆ ಎಲೆ ಮರೆ ಕಾಯಿ ಯಾಗಿಯೇ ಉಳಿಯ ಬಯಸುವ ಅಪರೂಪದ ವ್ಯಕ್ತಿ. ಬಲಗೈಯಲ್ಲಿ ಕೊಟ್ಟದ್ದು ಎಡಗೈಗೂ ತಿಳಿಯಬಾರದು ಎಂಬಂತಹ ಅಸಾಮಾನ್ಯ ವ್ಯಕ್ತಿತ್ವ ಇವರದು. ತಾವು ಕಲಿತ ತಮ್ಮೂರಿನ ಸರ್ಕಾರಿ ಪ್ರೌಢಶಾಲೆ ವೇಣೂರು ಇದರ ಸಾಧನೆಯನ್ನು ಕಂಡು ಹೆಮ್ಮೆ ಪಟ್ಟವರು.

ಆದರೆ ಸುಮಾರು 600 ಮಕ್ಕಳಿದ್ದರೂ ಈ ಶಾಲೆಯಲ್ಲಿ ಮೂಲಭೂತ ಸೌಕರ್ಯ ಇಲ್ಲದಿರುವುದನ್ನು ಕಂಡು ಮರುಕ ಪಟ್ಟು 2,50,000 ರೂ ದೇಣಿಗೆಯಾಗಿ ನೀಡಿ ಉದಾರತೆಯನ್ನು ಮೆರೆದಿದ್ದಾರೆ. ಇವರ ಈ ಉದಾರ ಮನಸ್ಸಿಗೆ ಶಾಲಾ ಉಪ ಪ್ರಾಂಶುಪಾಲರು, ಅಧ್ಯಾಪಕ ವೃಂದ ,ಶಾಲಾ ಅಭಿವೃದ್ಧಿ ಸಮಿತಿಯವರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

p>

LEAVE A REPLY

Please enter your comment!
Please enter your name here