ಉಜಿರೆಯ ಕಿರಣ್ ಅಗ್ರೋಟೆಕ್ ನಿಂದ ಸೇವಾಭಾರತಿಗೆ ಸೂಪರ್ ಗೋಲ್ಡ್ ಸ್ಪ್ರೇಯರ್(ಫಾಗ್) ಯಂತ್ರದ ಕೊಡುಗೆ

0

ಕನ್ಯಾಡಿ: ಕಿರಣ್ ಅಗ್ರೋಟೆಕ್ ನ ಮಾಲಿಕ ಪ್ರಕಾಶ್ ಬಿ.ಕೆ ಇವರು ಜುಲೈ 20 ರಂದು ಸೇವಾಭಾರತಿ ಕನ್ಯಾಡಿಯ ಕಚೇರಿಗೆ ಭೇಟಿ ನೀಡಿ, ಸೊಳ್ಳೆಯನ್ನು ಮುಕ್ತಮಾಡುವ ಸೂಪರ್ ಗೋಲ್ಡ್ ಸ್ಪ್ರೇಯರ್(ಫಾಗ್) ಯಂತ್ರವನ್ನು ಸೇವಾಧಾಮಕ್ಕೆ ಕೊಡುಗೆಯಾಗಿ ನೀಡಿದರು.

ಇವರು ಸೇವಾಭಾರತಿ/ ಸೇವಾಧಾಮದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿ,ಈ ಹಿಂದಿನಂತೆ ಮುಂದೆಯೂ ಸೇವಾಕಾರ್ಯಗಳಿಗೆ ಕೈ ಜೋಡಿಸುತ್ತೇನೆ ಎಂದು ಹೇಳಿ ಯಂತ್ರವನ್ನು ಸೇವಾಭಾರತಿಯ ಸಲಹಾ ಸಮಿತಿ ಸದಸ್ಯ ರಜತ್ ರಾವ್ ಇವರಿಗೆ ಹಸ್ತಾಂತರಿಸಿದರು.

ರಜತ್ ರಾವ್ ಇದನ್ನು ಸ್ವೀಕರಿಸಿ ಫಲಾನುಭವಿಗಳು ಮತ್ತು ಸಂಸ್ಥೆಯ ಪರವಾಗಿ ಧನ್ಯವಾದವಿತ್ತರು ಹಾಗೂ ಈ ಸಂದರ್ಭದಲ್ಲಿ ಸೇವಾಭಾರತಿಯ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

ಉಜಿರೆಯಲ್ಲಿ ಮುಖ್ಯ ಸೇವಾಕೇಂದ್ರವಿದ್ದು ಈ ವರ್ಷದಿಂದ ಕೊಕ್ಕಡದಲ್ಲೂ ಸೇವಾವಿಭಾಗ ಹೊಂದುವ ಮೂಲಕ ಕಿರಣ್ ಆಗ್ರೋ ಟೆಕ್ ಕೃಷಿಕರ ಅಶೋತ್ತರಗಳಿಗೆ ಶ್ರಮಿಸುವಲ್ಲಿ ಸಾಫಲ್ಯ ಕಂಡಿದೆ.

LEAVE A REPLY

Please enter your comment!
Please enter your name here