ಕೊಲ್ಲಿ ಫೀಡರ್ ಬಂಗಾಡಿ ಪರಿಸರದಲ್ಲಿ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಲಾಗದ ಮೆಸ್ಕಾಂ ಇಲಾಖೆ

0

ಬೆಳ್ತಂಗಡಿ: ಇಂದಬೆಟ್ಟು-ಕೊಲ್ಲಿ ಫೀಡರ್ ಬಂಗಾಡಿ ವ್ಯಾಪ್ತಿಯಲ್ಲಿ ಮಳೆಗಾಲದ ಮುಂಚೆಯಿಂದಲೊ ಆಗುತ್ತಿರುವ ವಿದ್ಯುತ್ ಸಮಸ್ಯೆಯ ಬಗ್ಗೆ ಬೆಳ್ತಂಗಡಿ ಇಲಾಖೆಯ ಆಧಿಕಾರಿಯವರಿಗೆ(ಎಇಇ) ಸಾರ್ವಜನಿಕ ಲಿಖಿತ ಮನವಿಯನ್ನು ನೀಡಿ ಒಂದು ತಿಂಗಳೊಳಗಡೆ ಸರಿ ಪಡಿಸುವುದಾಗಿ ಭರವಸೆಯನ್ನು ನೀಡಿ ತಿಂಗಳು ಕಳೆದರೂ ನಾಯಿ ಬಾಲ ಡೊಂಕೆ ಅಂದ ಹಾಗೆ ಆಗಿದೆ.

ಹಗಲಲ್ಲಿ ಸಮರ್ಪಕ ವಿದ್ಯುತ್ ಇಲ್ಲ 5 ದಿವಸದಿಂದ ರಾತ್ರಿ 11 ಗಂಟೆ ಸಮಯದಿಂದ ಬೆಳಿಗ್ಗೆ 7-8 ಗಂಟೆಯವರೆಗೆ ಪ್ರತಿ ನಿತ್ಯ ವಿದ್ಯುತ್ ಇರುವುದು ಇಲ್ಲ.

ಸೊಳ್ಳೆ ಕಾಟವು ಆಧಿಕವಾಗಿರುವುದರಿಂದ ಡೆಂಗ್ಯೂ ಜ್ವರವು ಹೆಚ್ಚುತ್ತಿದ್ದು ಪ್ಯಾನ್ ಇಲ್ಲದೆ ನಿದ್ದೆ ಮಾಡುವುದೆ ಕಷ್ಟವಾಗಿದೆ, ಬೆಳಿಗ್ಗೆ ಶಾಲಾ ಮಕ್ಕಳಿಗೆ, ಕೆಲಸಕ್ಕೆ ಹೋಗುವವರಿಗೆ ಉಪಹಾರ ತಯಾರಿ ಮಾಡುವುದು ಸಮಸೈಯಾಗುತ್ತಿದೆ.
ಇನ್ನು ಹಲವು ಕಡೆ ಹೆಚ್ ಟಿ ಲೈನ್ ತಾಗಿಕೊಂಡಿರುವ ಗೀಡ ಗಂಟಿಗಳ ತೆರವು ಸಂಪೂರ್ಣವಾಗಿಲ್ಲ.

ಇತ್ತಿಚೆಗೆ ಬಂಗಾಡಿ ಫಿಚಾಲಾರು ಟಿಸಿ ಯಲ್ಲಿ ಹೈ ವೋಲ್ಟೇಜ್ ವಿದ್ಯುತ್ ಹರಿದು ಲಿಂಗಾಂತ್ಯಾರು ಜನಾರ್ಧನ ದೇವಾಡಿಗರ ಮನೆಯ ಟವಿ ಸಂಪೂರ್ಣ ಸುಟ್ಟು ಹೋಗಿ ಮನೆಯು ಆಪಾಯದಿಂದ ಪಾರಾಗಿದೆ ಹಾಗೂ ನೆರೆಯ 2 ಮನೆಯ ಪ್ಯಾನ್ ಸುಟ್ಟು ಹೋಗಿವೆ.

ಮಳೆಗಾಲದ ಮುಂಚೆ ತೆರವುಗೊಳಿಸಬೇಕಾದ ಮರ ,ಗಿಡ, ಗೆಲ್ಲುಗಳನ್ನು ಮಳೆಗಾಲದಲ್ಲಿ ತೆರವುಗೊಳಿಸಲು ಮಳೆ ಅಡ್ಡಿಯಾಗುತ್ತಿರುವ ಕಾರಣ ತಿಳಿಸುತ್ತಾರೆ.

ಇಲ್ಲಿ ಲೈನ್ ಮ್ಯಾನ್ ಸಿಂಬಂದಿಗಳ ಕೊರತೆಯು ಇದ್ದು, ಕೂಡಲೆ ಸಂಬಂಧ ಪಟ್ಟ ಆಧಿಕಾರಿಗಳು ವಿದ್ಯುತ್ ಸಮಸ್ಯೆಯನ್ನು ಬಗೆಹರಿಸದೆ ಇದ್ದಲ್ಲಿ ಕಛೇರಿಯ ಮುಂದೆ ಪ್ರತಿಭಟನೆ ಮಾಡುವುದಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here