ಬೆಳ್ತಂಗಡಿ: ಬೆಳ್ತಂಗಡಿ ಜೆಸಿಐ ಮಂಜುಶ್ರೀ ವತಿಯಿಂದ ಬೆಳ್ತಂಗಡಿ ಕರ್ನಾಟಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬಿಸಿಎಂ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳಿಗೆ ಎಂಪವರಿಂಗ್ ಯೂತ್ ತರಬೇತಿ ಕಾರ್ಯಕ್ರಮ ಜೂ.17ರಂದು ನಡೆಯಿತು.
ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ವಿಶ್ವನಾಥ್ ಹೊಳ್ಳ ಬಳಂಜ ಇವರು ಉದ್ಘಾಟಿಸಿ ಶುಭ ಹಾರೈಸಿದರು.ವಲಯ ತರಬೇತುದರರು, ಘಟಕದ ಉಪಾಧ್ಯಕ್ಷೆ ಹೇಮಾವತಿ ಕೆ. ತರಬೇತಿಯನ್ನು ನಡೆಸಿಕೊಟ್ಟರು. 35 ವಿದ್ಯಾರ್ಥಿನಿಯರು ತರಬೇತಿಯಲ್ಲಿ ಭಾಗವಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ರಂಜಿತ್ ಎಚ್.ಡಿ ವಹಿಸಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಲ್ಲಿ ತರಬೇತಿಯ ಮಹತ್ವವನ್ನು ವಿವರಿಸಿ ಸ್ವಾಗತಿಸಿದರು.
ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಚಂದ್ರಪ್ಪ ಡಿ. ಮುಖ್ಯ ಅತಿಥಿಯಾಗಿ ಭಾಗವಹಿಸಿ, ತರಬೇತಿಯ ಪ್ರಯೋಜನದ ಬಗ್ಗೆ ವಿವರಿಸಿ, ಆಯೋಜನೆ ಮಾಡಿದ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಘಟಕಕ್ಕೆ ಧನ್ಯವಾದ ಸಲ್ಲಿಸಿದರು.
ವೇದಿಕೆಯಲ್ಲಿ ಲೇಡಿ ಜೆಸಿ ಸಂಯೋಜಕಿ ಶ್ರುತಿ ರಂಜಿತ್ ಉಪಸ್ಥಿತರಿದ್ದರು. ವೇದಿಕೆ ಆಹ್ವಾನವನ್ನು ಪೂರ್ವ ಅಧ್ಯಕ್ಷ ನಾರಾಯಣ ಶೆಟ್ಟಿ, ತರಬೇತಿದಾರರ ಪರಿಚಯವನ್ನು ಜೆಜೆಸಿ ಅಧ್ಯಕ್ಷ ಸಮನ್ವೀತ್ ಕುಮಾರ್, ಜೆಸಿ ವಾಣಿಯನ್ನು ದೀಪ್ತಿ ಕುಲಾಲ್ ವಾಚಿಸಿದರು.
ಕಾರ್ಯಕ್ರಮದಲ್ಲಿ ಪೂರ್ವಧ್ಯಕ್ಷ ಶುಭಾಶ್ಚಂದ್ರ ಎಮ್.ಪಿ. ಭಾಗವಹಿಸಿದರು.ಜೊತೆ ಕಾರ್ಯದರ್ಶಿ ರಾಮಕೃಷ್ಣ ವಂದಿಸಿದರು.