

ಲಾಯಿಲ: ಲಾಯಿಲ ಗ್ರಾಮ ಪಂಚಾಯತ್ ನಲ್ಲಿ ಗ್ರಾಮ ಮಟ್ಟದ ವಿಪತ್ತು ನಿರ್ವಹಣಾ ಸಮಿತಿ ಸಭೆಯನ್ನು ಜೂ.13ರಂದು ನಡೆಸಲಾಗಿದ್ದು.
ಹೊಳೆಬದಿ ವಾಸ್ತವ್ಯವಿರುವ ಕುಟುಂಬಗಳಿಗೆ ಹಾಗೂ ಗುಡ್ಡ ಕುಸಿಯುವ ಸಾಧ್ಯತೆ ಇರುವ ಜನವಸತಿ ಪ್ರದೇಶಗಳ ಮನೆಗಳಿಗೆ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ತಿಳುವಳಿಕೆ ನೀಡಲು ಸಭೆಯಲ್ಲಿ ಚರ್ಚಿಸಲಾಯಿತು.

ಸದ್ರಿ ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಪಂ.ಅಭಿವೃದ್ಧಿ ಅಧಿಕಾರಿ, ಶ್ರೀನಿವಾಸ ಡಿ.ಪಿ, ಪಂಚಾಯತ್ ಲೆಕ್ಕಾ ಸಹಾಯಕಿ ಸುಪ್ರೀತಾ ಶೆಟ್ಟಿ, ಗ್ರಾಮ ಆಡಳಿತಾಧಿಕಾರಿ ರನಿತ, ಗ್ರಾ.ಪಂ ಸದಸ್ಯರಾದ ಜಯಂತಿ, ರಜನಿ ಎಂ.ಆರ್, ಪ್ರಸಾದ್ ಶೆಟ್ಟಿ ಹಾಗೂ ವಿಪತ್ತು ನಿರ್ವಹಣಾ ಸಮಿತಿ ಸದಸ್ಯರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಹಾಜರಿದ್ದರು.