ಮಚ್ಚಿನ: ಮನುಷ್ಯನಿಗೆ ಹಾಗು ಪರಿಸರಕ್ಕೆ ಅವಿನಾವ ಸಂಬಂದ ಇದೆ ಹಾಗಾಗೀ ಮನುಷ್ಯ ಪರಿಸರಕ್ಕೆ ಋಣಿಯಾಗಿ ಬದುಕಲೇಬೇಕೂ ಪರಿಸರ ವನ್ನೂ ಉಳಿಸಿ ಬೆಳೆಸುವ ದೃಷ್ಟಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪರಿಸರಕ್ಕೆ ಪೂರಕವಾದ ಬೀಜದ ಉಂಡೆ ತಯಾರಿ, ಸಾಲು ಮರ ಕೆ ಗಿಡ ನಾಟಿ, ಶಾಲಾ ವನ ರಚನೆ, ದೇವರ ಕಾಡು ನಿರ್ಮಾಣ , ಕಾಡಿನಲ್ಲಿ ಹಣ್ಣಿನ ಗಿಡಗಳ ನಾಟಿ ಯ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆಯನ್ನು ನೀಡುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ನಿರ್ದೇಶಕ ಮಹಾಬಲ ಕುಲಾಲ್ ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ಗುರುವಾಯನಕೆರೆ, ಸರಕಾರಿ ಪ್ರೌಡ ಶಾಲೆ ಮಚ್ಚಿನ, ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಮಚ್ಚಿನ, ಶೌರ್ಯ ವಿಪತ್ತು ನಿರ್ವಹಣಾ ಗಟಕದ ಮಚ್ಚಿನ ಪಾಲಡ್ಕ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ಸರಕಾರಿ ಪ್ರೌಡ ಶಾಲೆ ಮಚ್ಚಿನ ದಲ್ಲೀ ಶಾಲಾ ವನ ದ ಗಿಡ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗಿಡ ಮರಗಳನ್ನು ಬೆಳೆಸಬೇಕು, ಗಿಡಗಳನ್ನ ನಾಟಿ ಮಾಡಿ ನಿರ್ವಹಣೆ ಮಾಡುವ ಜವಾಬ್ದರಿಯನ್ನು ಮಕ್ಕಳು ತೆಗೆದುಕೊಳ್ಳಬೇಕು ಪ್ಲಾಸ್ಟಿಕ್ ಬಳಕೆ ಯ ಬದಲು ಬಟ್ಟೆ ಚೀಲಗಳನ್ನು ಬಳಸಿ ಪರಿಸರಕ್ಕೆ ತನ್ನದೇ ಆದ ಕೊಡುಗೆಯನ್ನು ಪ್ರತಿಯೊಬ್ಬರೂ ನೀಡಬೇಕು ಎಂದು ಕರೆ ನೀಡಿದರು ಮಕ್ಕಳು ಹುಟ್ಟು ಹಬ್ಬದಂದು ಕನಿಷ್ಟ ಎರಡು ಗಿಡಗಳನ್ನ ನಾಟಿ ಮಾಡಿ ಪರಿಸರ ಪ್ರೇಮ ಬೆಳೆಸಿಕೊಳ್ಳಬೇಕೂ ಎಂದರುಸಂಪನ್ನಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮಚ್ಚಿನ ಶಾಲಾ ಶಿಕ್ಷಕರಾದ ರಮೇಶ್ ಮಾತನಾಡುತ್ತ ಪರಿಸರ ನಾಶವಾಗುತ್ತಿರುವುದನ್ನ ಮನಗಂಡು 1972 ರಲ್ಲೀ ವಿಶ್ವ ಸಂಸ್ಥೆ ವಿಶ್ವ ಪರಿಸರ ದಿನಾಚರಣೆ ಗೋಷಣೆ ಮಾಡಿದೆ ಪ್ರತೀ ವರ್ಷವೂ ಹೊಸ ದ್ಯೆಯಾ ವಾಕ್ಯ ಗಳೊಂದಿಗೆ ಪರಿಸರ ಉಳಿಸಲು ಪ್ರೆರಣೆ ನೀಡುತ್ತಿದೆ ಎಂದರು ಬೂಮಿಯು ಸತ್ವ ಕಳೆದುಕೊಂಡಿದೆ ಇದರಿಂದಾಗಿ ಸರಿಯಾಗಿ ಬೆಳೆ ಬೆಳೆಯಲು ಸಾಧ್ಯ ಆಗುತ್ತಿಲ್ಲ ಪ್ರಾಣಿಗಳಿಂದ ಪರಿಸರ ನಾಶ ಆಗುತ್ತಿಲ್ಲ ಬುದ್ದಿ ಜೀವಿ ಎನಿಸಿರುವ ಮನುಷ್ಯನಿಂದ ಆಗುತ್ತಿದೆ ಎಂಬುವುದು ವಿಷಾದನೀಯ ಎಂದರು.
ಮಚ್ಚಿನ ಗ್ರಾಮ ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ, ಉಪಾಧ್ಯಕ್ಷೆ ಸೋಮವತಿ, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ವಸಂತಿ ಲಕ್ಮಣ, ಮುಖ್ಯ ಶಿಕ್ಷಕ ಪ್ರಕಾಶ್, ಸತ್ಯ ನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಹರ್ಷ, ಒಕ್ಕೂಟದ ಅಧ್ಯಕ್ಷ ಜಯ ಪೂಜಾರಿ ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಸದಸ್ಯ ಸಂದೀಪ್,ಯೋಜನಾಧಿಕಾರಿ ದಯಾನಂದ ಪೂಜಾರಿ, ಮೇಲ್ವಿಚಾರಕ ವಸಂತ್,ಸೇವಾ ಪ್ರತಿನಿಧಿ ಗಳಾದ ಪರಮೇಶ್ವರ್, ನಂದಿನಿ ಮೊದಲಾದವರು ಉಪಸ್ಥಿತರಿದ್ದರು ಶೌರ್ಯ ವಿಪತ್ತು ಗಟಕದ ಸದಸ್ಯರು ಗಿಡಗಳ ನಾಟಿ ಯ ಕೆಲಸವನ್ನು ನಿರ್ವಹಿಸಿದರು.