ಮಚ್ಚಿನ: ಸ.ಪ್ರೌ.ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಪೂರ್ವ ತಯಾರಿ ಪ್ರಯುಕ್ತ ಶ್ರಮದಾನ

0

ಮಚ್ಚಿನ:ಮಚ್ಚಿನ ಸರಕಾರಿ ಪ್ರೌಢ ಶಾಲೆಯಲ್ಲಿ ಜೂನ್ 05ರಂದು ನಡೆಯಲಿರುವ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಪೂರ್ವ ತಯಾರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ ಟ್ರಸ್ಟ್, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಗಿಡ ನಾಟಿ ಕಾರ್ಯಕ್ರಮಕ್ಕೆ ಹೊಂಡ ರಚನೆ, ಶಾಲಾ ಕೈತೋಟ ರಚನೆ, ಮಡಂತ್ಯಾರು ಹಾಗೂ ಮಚ್ಚಿನ, ಪಾಲಡ್ಕ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರ ನೇತೃತ್ವದಲ್ಲಿ ಶ್ರಮದಾನ ನಡೆಸಲಾಯಿತು.

ವಲಯ ಮೇಲ್ವಿಚಾರಕ ವಸಂತ ಕುಮಾರ್ ರವರು ಮಾಹಿತಿ ಮಾರ್ಗದರ್ಶನ ನೀಡಿದರು.ಶಾಲಾ ಶಿಕ್ಷಕ ಸುಭಾಷ್, ಸೇವಾ ಪ್ರತಿನಿಧಿ ಪರಮೇಶ್ವರ್, ಹರಿಣಾಕ್ಷಿ ಉಪಸ್ಥಿತರಿದ್ದರು.

ಮಡಂತ್ಯಾರು ಘಟಕದ ಬಾಲಕೃಷ್ಣ ಹಾರಬೆ, ದಯಾನಂದ ಹಚ್ಚಬೆ, ಯೋಗೀಶ್ ಕೋಡ್ಲಕ್ಕೆ, ಸುಜೀತ್ ಕುಮಾರ್, ಪುರುಷೋತ್ತಮ ಪುಂಜಾಲಕಟ್ಟೆ, ಸತೀಶ್ ಆಚಾರ್ಯ ಮತ್ತು ಮಚ್ಚಿನ-ಪಾಲಡ್ಕ ಘಟಕದ ಪ್ರಭಾಕರ ಮುದಲಡ್ಕ, ಹೊನ್ನಪ್ಪ ಮೂಲ್ಯ, ಜಯ ಪೂಜಾರಿ, ಅವಿನಾಶ್ ಶ್ರಮದಾನದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here