ಪತ್ರಿಕಾಗೋಷ್ಠಿ- ಜೂ.9: ಅಳದಂಗಡಿಯಲ್ಲಿ ಆಲಡ್ಕ ಹಿಂದೂ ಯುವ ಶಕ್ತಿ ಬಳಗದಿಂದ ಆರೋಗ್ಯ ಶಿಬಿರ, ಅಂಗಾಂಗ ದಾನ ನೋಂದಾವಣೆ

0

ಬೆಳ್ತಂಗಡಿ: ಅಳದಂಗಡಿ ಸತ್ಯದೇವತಾ ದೈವಸ್ಥಾನದಲ್ಲಿ ಪ್ರತಿ ವರ್ಷದಂತೆ ನಡೆಯುವ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭದಲ್ಲಿ ಆಲಡ್ಕ ಹಿಂದೂ ಯುವ ಶಕ್ತಿ ಬಳಗ ಕೈಜೋಡಿಸಿಕೊಂಡು ಬರುತ್ತಿದ್ದು ಈ ವರ್ಷ ಜೂ.9ರಂದು ನಡೆಯುವ ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ಶಿಬಿರ ಮತ್ತು ಅಂಗಾಂಗ ದಾನ ನೊಂದಾವಣೆ ವಿಷಯ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಆಲಡ್ಕ ಹಿಂದೂ ಯುವ ಶಕ್ತಿ ಬಳಗದ ಅಧ್ಯಕ್ಷ ದೇವದಾಸ ಸಾಲಿಯಾನ್ ಹೇಳಿದರು. ಅವರು ಜೂ.3ರಂದು ಬೆಳ್ತಂಗಡಿ ಶ್ರೀ ಗುರು ನಾರಾಯಣ ಸಂಕೀರ್ಣದ ಸಭಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಆಲಡ್ಕ ಹಿಂದೂ ಯುವಶಕ್ತಿ ಬಳಗ ಕಳೆದ 8 ವರ್ಷಗಳಿಂದ ವಿವಿಧ ಸಮಾಜಮುಖಿ ಕಾರ್ಯ ನಡೆಸುತ್ತಾ ಬರುತ್ತಿದ್ದು, ಅಳದಂಗಡಿ ಸತ್ಯ ದೇವತಾ ದೈವಸ್ಥಾನದಲ್ಲಿ ಪ್ರತಿ ವರ್ಷ ಮಾಡುತ್ತಿರುವ ಪುಸ್ತಕ ವಿತರಣೆಯಲ್ಲಿ ಕೈಜೋಡಿಸಿ ಕೊಂಡು ಬರುತ್ತಿದ್ದು, ಈ ಬಾರಿ 6000 ಮಕ್ಕಳಿಗೆ ಪುಸ್ತಕ ವಿತರಣೆ, ದೇಶ ಸೇವೆ ಮಾಡಿದ ವೀರ ಯೋಧರಿಗೆ, ಖ್ಯಾತ ಮುಳುಗು ತಜ್ಞ ಈಶ್ವರ ಮಲ್ಪೆ, ಸಬಿತಾ ಮೋನಿಸ್ ಗರ್ಡಡಿ ಇವರಿಗೆ ಸಮಾರೋಪ ಸಮಾರಂಭದಲ್ಲಿ ಸನ್ಮಾನ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಚಲನಚಿತ್ರ ನಟ ರಮೇಶ್ ಅರವಿಂದ್ ಭಾಗ ವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಹಿಂದೂ ಯುವ ಶಕ್ತಿ ಬಳಗದಿಂದ ಕೆಎಂಸಿ ಸಹಕಾರದಲ್ಲಿ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಜೊತೆಗೆ ಅಂಗಾಂಗ ದಾನ ನೋಂದಾವಣೆ ನಡೆಯಲಿದೆ. ಈಗಾಲೇ ಸುಮಾರು 60 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಸಂಘಟನೆ 8 ವರ್ಷದಿಂದ ಹಲುವು ಸಮಾಜಮುಖಿ ಕಾರ್ಯಕ್ರಮ ಮಾಡಿದ್ದು, ಮೂರು ಮನೆ ನಿರ್ಮಾಣ, ರೂಪಾಯಿ 15 ಲಕ್ಷಕ್ಕೂ ಮಿಕ್ಕಿ ವೈದ್ಯಕೀಯ ಚಿಕಿತ್ಸಾ ವೆಚ್ಚ ಎನ್ನಿತರ ಸೇವಾ ಕಾರ್ಯ ಮಾಡುತ್ತಾ ಬರುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಯುವ ಶಕ್ತಿ ಬಳಗದ ಕಾರ್ಯದರ್ಶಿ ಸಂತೋಷ ಕಟ್ಟೆ, ಸಂಘಟಕರಾದ ಪೂರ್ಣೇಶ್, ವಿಶ್ವನಾಥ ಬಂಗೇರ, ಸುರೇಂದ್ರ ಕೋಟ್ಯಾನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here