ಬೆಳ್ತಂಗಡಿ: ಬೆಳ್ತಂಗಡಿ ಜೆಸಿಐ ಮಂಜುಶ್ರೀಯ ನೇತೃತ್ವದಲ್ಲಿ ಮಹಿಳಾ ಜೆಸಿ ಮತ್ತು ಜೆಜೆಸಿಯ ಸಹಕಾರದಿಂದ ಹಾಗೂ ತಾಲೂಕಿನ ಇತರ ಸಂಘ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಫೆಬ್ರವರಿಯಲ್ಲಿ ಬೆಳ್ತಂಗಡಿಯ ಅಯ್ಯಪ್ಪ ಗುಡಿಯಿಂದ ಜೇಸಿ ಭವನದವರೆಗೆ ನಡೆದ ಪಿಂಕ್ ಮ್ಯಾರಥಾನ್ “ನಾರಿ ಇನ್ ಪಿಂಕ್ ಸಾರಿ” ಕ್ಯಾನ್ಸರ್ ಜಾಗೃತಿ ಜಾಥಾ ಮತ್ತು ನಂತರ ಜೆಸಿ ಭವನದಲ್ಲಿ ಕ್ಯಾನ್ಸರ್ ಮಾಹಿತಿ ಕಾರ್ಯಕ್ರಮವು ನಡೆದಿತ್ತು.
ಜೆಸಿಐ ಬೆಳ್ತಂಗಡಿಯು ಹಮ್ಮಿಕೊಂಡ ಈ ಸಮಾಜಮುಖಿ ಮತ್ತು ಬಹಳಷ್ಟು ಮಹತ್ವವುಳ್ಳ ಕಾರ್ಯಕ್ರಮವನ್ನು ಗುರುತಿಸಿ ಜೆಸಿಐ ಭಾರತವು ವಲಯ 15ರಲ್ಲಿ ಬೆಳ್ತಂಗಡಿ ಘಟಕಕ್ಕೆ ” Top Performer” ಎಂಬ ಮನ್ನಣೆಯನ್ನು ನೀಡಿ ಗೌರವಿಸಿದೆ.
ಜೆಸಿಐ ಭಾರತದ ವಲಯ 15 ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿದೆ.
p>