ಅಳದಂಗಡಿ: ಪ್ರಪಂಚದ ಈ ಸುಂದರ ಸೃಷ್ಠಿಯಲ್ಲಿ ಭಗವಂತನು ಮನುಷ್ಯನನ್ನು ತುಂಬಾ ಅಚ್ಚುಕಟ್ಟಾಗಿ ನಿರ್ಮಿಸಿದ್ದಾನೆ ಮನುಷ್ಯ ಅಂದಮೇಲೆ ಸಹಜವಾಗಿ ಖಾಯಿಲೆ, ಅಪಘಾತ, ನ್ಯೂನ್ಯತೆಗಳು ಇರುತ್ತವೆ.ನಾವು ಬದುಕಿರೋವರೆಗೆ ನಮ್ಮ ದೇಹದ ಅಂಗಾಂಗಗಳನ್ನು ಆದಷ್ಟು ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿರುತ್ತೇವೆ ಆದರೆ ಕೊನೆಗೊಂದು ದಿನ ಮಣ್ಣಾಗಿ ಹೋಗುವುದರ ಬದಲು “ಅಂಗಾಂಗ ದಾನ” ಮಾಡಿ ಸಮಾಜದಲ್ಲಿ ಮನುಷ್ಯ ಅಳಿದರೂ ಮಾನವೀಯತೆಯನ್ನು ಜೀವಂತವಾಗಿಡುವ ಹೊಸ ಯೋಜನೆಯನ್ನು ರೂಪಿಸಿಕೊಂಡಿದ್ದೇವೆ ಇದಕ್ಕೆ ತಮ್ಮೆಲ್ಲರ ಸಹಕಾರವೂ ಅತ್ಯಗತ್ಯ.
ಆರೋಗ್ಯವಂತ ಮನುಷ್ಯನು ಸತ್ತ ಬಳಿಕ ಸುಟ್ಟು ಬೂದಿಯಾಗಿ ವ್ಯರ್ಥವಾಗುವ ಬದಲು ಆತನ ಅಂಗಾಂಗಗಳನ್ನು ಇತರ ರೋಗಿಗೆ ಅಳವಡಿಸಿ ಅವರುಗಳ ಬಾಳಲ್ಲಿ ಬೆಳಕಾಗುವುದರೊಂದಿಗೆ ಮುಂದಿನ ಪೀಳಿಗೆಗು ಕೂಡ ಈ ಯೋಜನೆ ಪ್ರೇರಣೆಯಾಗಿರಲಿ.
ಮೇ 9ರಂದು ಅಳದಂಗಡಿ ಸೋಮನಾಥೇಶ್ವರಿ ದೇವಸ್ಥಾನದ ವಠಾರದಲ್ಲಿ ಅಂಗಾಂಗದಾನ ನೋಂದಣಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸ್ವ ಇಚ್ಛೆಯಿಂದ ದಾನಿಗಳು ತಮ್ಮ ಹೆಸರನ್ನು ನೋಂದಾಯಿಸಬೇಕಾಗಿ ವಿನಂತಿ.
ಹೆಚ್ಚಿನ ಮಾಹಿತಿಗಾಗಿ ಸಂತೋಷ್ ಕಟ್ಟೆ 9964666466, ದೇವದಾಸ್ ಸಾಲ್ಯಾನ್ 9449639709, ಪೂರ್ಣೇಶ್ 9972696578 ಸಂಪರ್ಕಿಸಲು ವಿನಂತಿಸಲಾಗಿದೆ.