


ಗುರುವಾಯನಕೆರೆ: ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯ ಮರು ಮೌಲ್ಯ ಮಾಪನದಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಇನ್ನಷ್ಟು ಹೆಚ್ಚು ಅಂಕಗಳನ್ನು ಪಡೆದು, ರ್ಯಾಂಕ್ ಹೆಚ್ಚಿಸಿಕೊಂಡಿದ್ದಾರೆ.
600 ಅಂಕಗಳ ಪೈಕಿ 595 ಅಂಕಗಳನ್ನು ಪಡೆದ ಅನುಪ್ರಿಯ ರಾಜ್ಯಕ್ಕೆ 4ನೆಯ ಸ್ಥಾನ, ತಲಾ 594 ಪಡೆದ ಕೃತ್ತಿಕಾ ಸಿ ಬಿ ಹಾಗೂ ಅಭಿಷೇಕ್ ವೈ.ಎಸ್ ರಾಜ್ಯಕ್ಕೆ 5ನೆಯ ಸ್ಥಾನ, 592 ಅಂಕಗಳನ್ನು ಪಡೆದ ಆಶ್ರಿತ 7ನೆಯ ಸ್ಥಾನ, ತಲಾ 591 ಅಂಕಗಳನ್ನು ಪಡೆದ ಧನ್ವಿ ಭಟ್, ತನ್ಮಯಿ ಶ್ಯಾನುಭೋಗ್, ರಾಜ್ಯಕ್ಕೆ 8ನೆಯ ಸ್ಥಾನ, 589 ಅಂಕಗಳನ್ನು ಪಡೆದ ಸಂಜನಾ ಕೆ ಆರ್ ಹಾಗೂ ವೈಭವ ಶೆಟ್ಟಿ ರಾಜ್ಯಕ್ಕೆ 10ನೆಯ ಸ್ಥಾನ ಪಡೆದುಕೊಂಡಿದ್ದಾರೆ.


ತಲಾ 588 ಅಂಕಗಳನ್ನು ಪಡೆದುಕೊಂಡ ರಮ್ಯ ನವೀನ್, ತೃಷ ಶೇಖರ್, ಶಮಂತ್ ಎನ್ ಎಲ್, ತಲಾ 585 ಅಂಕಗಳನ್ನು ಪಡೆದುಕೊಂಡ ಪೂರ್ವಿಕ ಪೂಜಾರಿ, ಮಾನ್ಯ ಎಂ. ಜೈನ್, ಎಂ. ಕೃಷ್ ಕುಮಾರ್ ತಮ್ಮ ಅಂಕಗಳನ್ನು ಹೆಚ್ಚಿಸಿ ಕೊಂಡು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡವರು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರು, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.








