ಮಚ್ಚಿನ: ಇತಿಹಾಸ ಪ್ರಸಿದ್ಧ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಮೇಷ ಜಾತ್ರೋತ್ಸವ ಬ್ರಹ್ಮಕಲಶ ವಾರ್ಷಿಕ ದಿನಾಚರಣೆಯು ಎಪ್ರಿಲ್ 23ರಿಂದ ಮೇ 2ರವರೆಗೆ ನಡೆಯಲಿದ್ದು.
ಏ.29ರಂದು ಬ್ರಹ್ಮ ಕಲಶ ದಿನ ಪ್ರಯುಕ್ತ ಗಣಯಾಗ, ಏಕರುದ್ರಾಭಿಷೇಕ, ಪಾವನಹೋಮ, ಆಶ್ಲೇಷ ಬಲಿ, ಶ್ರೀ ಅನಂತೇಶ್ವರ ಸ್ವಾಮಿಗೆ ವಿಶೇಷ ಕಲಶಾಭಿಷೇಕ, ಶ್ರೀ ಗಣಪತಿ ದೇವರಿಗೆ ಕಟಹ ಅಪೂಪ ನೈವೇದ್ಯ ಸಮರ್ಪಣೆ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಚಂದ್ರಮಂಡಲೋತ್ಸವ, ವಸಂತ ಸೇವೆ, ಮಹಾ ಪೂಜೆ ನಡೆಯಿತು.
ದೇವಾಲಯದ ಆನುವಂಶಿಕ ಆಡಳಿತ ಮೊಕ್ತೇಸರರಾದ ಡಾ.ಎಂ.ಹರ್ಷ ಸಂಪಿಗೆತ್ತಾಯ ಹಾಗೂ ಊರವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು.
p>