ಕಕ್ಯಪದವು: ಎಲ್.ಸಿ.ಆರ್ ವಿದ್ಯಾಸಂಸ್ಥೆ ಇಲ್ಲಿನ ಪದವಿ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ವಾಣಿಜ್ಯ ಚಟುವಟಿಕೆಗಳ ಮೂಲಕ ವಾಣಿಜ್ಯ ನಿರ್ವಹಣಾ ತಂತ್ರಗಳ ಬಗೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಾಣಿಜ್ಯ ಸಂಘದ ವಿದ್ಯಾರ್ಥಿಗಳ ನಾಲ್ಕು ತಂಡಗಳನ್ನು ರಚಿಸಿ, ವಾಣಿಜ್ಯ ಚಟುವಟಿಕೆಗಳನ್ನು ಮಾ.18ರಂದು ಹಮ್ಮಿಕೊಳ್ಳಲಾಯಿತು.
ಸ್ಪರ್ಟನ್ ತಂಡದ ಮೂಲಕ ಚಟುವಟಿಕೆಗಳಿಗೆ ಚಾಲನೆಯನ್ನು ನೀಡಿ ಹಲವಾರು ಮನೋರಂಜನಾ ಹಾಗೂ ನಿರ್ವಹಣಾ ಸ್ಪರ್ಧೆಯ ನ್ನು ಏರ್ಪಡಿಸಿ ವಿಜೇತ ತಂಡಗಳಿಗೆ ಬಹುಮಾನ ನೀಡಲಾಯಿತು.
ಸ್ಪರ್ಟನ್ ತಂಡ ತಂಡದ ವಿದ್ಯಾರ್ಥಿನಿಯರಾದ ಚೈತನ್ಯ , ಪ್ರಥ್ವಿ, ಭಾರ್ಗವಿ ಅಂತಿಮ ಬಿ.ಕಾಂ ಹಾಗೂ ಸರ್ಫುನ್ನೀಸಾ, ಹರ್ಷಿತಾ ಪ್ರಥಮ ಬಿ.ಕಾಂ ಕಾರ್ಯಕ್ರಮವನ್ನು ನೆರವೇರಿಸಿದರು.
ಸಂಸ್ಥೆಯ ಪ್ರಾಂಶುಪಾಲರಾದ ಜೋಸ್ಟನ್ ಲೋಬೊ, ಸಂಸ್ಥೆಯ ಸಂಯೋಜಕ ಯಶವಂತ್ ಜಿ.ನಾಯಕ್, ಪದವಿ ವಿಭಾಗದ ಮುಖ್ಯಸ್ಥರಾದ ದೀಕ್ಷಿತಾ ಇವರ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.
p>