ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ಸಂಘದ ವತಿಯಿಂದ ವೈದ್ಯಕೀಯ ನೆರವು- ಕಷ್ಟ ಎಂದಾಗ ನೆರವಾಗುತ್ತಿರುವ ಸಂಘಟನೆ

0

ಕಳೆಂಜ: 2017ರಲ್ಲಿ ವಾಟ್ಸಪ್ ಗ್ರೂಪ್ ಮೂಲಕ ಪ್ರಾರಂಭವಾದ ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ಸಂಘ ಮಾನವೀಯತೆ ನೆಲೆಯಲ್ಲಿ ಕೆಲಸ ಮಾಡುತ್ತಿದ್ದೂ ಸಂಕಷ್ಟದಲ್ಲಿರುವವರಿಗೆ ಜಾತಿ ಧರ್ಮದ ಗಡಿದಾಟಿ ಎಲ್ಲರಿಗೂ ತನ್ನ ಕೈಲಾದ ಸಹಾಯವನ್ನು ಮಾಡಿಕೊಂಡು ಬರುತ್ತಿದ್ದು.

ಈ ಹಿಂದೆ ದೀಪಿಕಾ ಎಂಬವರಿಗೆ ಹಾಗೂ ಸಂಘದ ಸದಸ್ಯರ ಪೈಕಿ ಹಲವಾರು ಜನರಿಗೆ ಸಹಾಯಹಸ್ತ ನೀಡುತ್ತಿದ್ದು ಇತ್ತೀಚೆಗೆ ಸಂಘದ ವತಿಯಿಂದ ಸದಸ್ಯರಾದ ಜೋರ್ಜ್ ವಿ.ಡಿ ಯವರ ಸಹೋದರ ಜೋಸೆಫ್ ವಿ.ಡಿ ಅವರು ಹೃದಯದ ಮತ್ತು ಮೆದುಳಿನ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುತ್ತಾರೆ.ಇವರ ಚಿಕಿತ್ಸೆಗೆ ಹಣದ ಅವಶ್ಯಕತೆಯಿರುವುದರಿಂದ ಇವರಿಗೆ ಸಂಘದ ಸದಸ್ಯರಿಂದ ಮತ್ತು ಊರ, ಪರಊರ ದಾನಿಗಳಿಂದ ಒಟ್ಟು ರೂ.3,75,000/- ಗಳನ್ನು ಸಂಗ್ರಹಿಸಿ ನೀಡಿರುತ್ತಾರೆ.

ಸಂಘದ ವತಿಯಿಂದ ವೈದ್ಯಕೀಯ ಉಚಿತ ಶಿಬಿರ, ಕ್ರಿಸ್ಮಸ್ ಸಂದರ್ಭದಲ್ಲಿ ಹಲವಾರು ಜನಪರ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ.ಸಂಘದ ಸ್ಥಾಪಕ ಅಧ್ಯಕ್ಷರಾಗಿ ಸಬಾಸ್ಟಿನ್ ಪಿ.ಟಿ, ಜೋಸೆಫ್ ಕೆ.ಡಿ ಯವರು ಈಗಿನ ಅಧ್ಯಕ್ಷರು, ಉಪಾಧ್ಯಕ್ಷರಾಗಿ ಶಾಜಿ ತೋಮಸ್ ಕಾರ್ಯದರ್ಶಿಯಾಗಿ, ತೋಮಸ್, ಕೋಶಧಿಕಾರಿಯಾಗಿ ಮ್ಯಾತ್ಯು ಕಾರ್ಯ ನಿರ್ವಹಿಸುತ್ತಿದ್ದಾರೆ.

p>

LEAVE A REPLY

Please enter your comment!
Please enter your name here