ಮಿತ್ತಬಾಗಿಲು: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ, ಶ್ರೀ ದುರ್ಗಾದೇವಿ ದೇವಸ್ಥಾನಲ್ಲಿ ದಾರ್ಮಿಕ ಸಭಾ ಕಾರ್ಯಕ್ರಮವು ದಂತ ವೈದ್ಯ ಡಾ.ದಯಾಕರ್ ಎಂ.ಎಂ ಅಧ್ಯಕ್ಷತೆಯಲ್ಲಿ ಮಾ.21ರಂದು ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಲ್ಲಿ ನಡೆಯಿತು.
ಉಡುಪಿ ಲೇಖಕರು ಮತ್ತು ಪತ್ರಕರ್ತ ಶ್ರೀಕಾಂತ ಇವರು ಮಾತನಾಡಿ ತುಳುನಾಡಿನಲ್ಲಿ ತಾಯಿಗೆ ಮಹತ್ವ ಇದೆ.ದೇವಸ್ಥಾನಲ್ಲಿ ಎರಡು ತಾಯಿಯ ವಿಗ್ರಹಗಳು ಇದೆ ಅದಕ್ಕೆ ಅದರದ್ದೇ ಅದರದೇ ಆದ ಶಕ್ತಿ ಇದೆ ಎಂದರು ದುರ್ಗಾದೇವಿ ಸೇವೆಯೊಂದಿಗೆ ಭಾರತ ಮಾತೆಯ ಸೇವೆಯನ್ನು ಮಾಡಿ ಮಕ್ಕಳಿಗೆ ಧರ್ಮದ ಶಿಕ್ಷಣವನ್ನು ಕೊಡುವ ಪ್ರಯತ್ನವನ್ನು ಮಾಡುವ ಎಂದರು.
ಶ್ರೀ ಕ್ಷೇತ್ರ ಅರಿಕೋಡಿ ಬೆಳಾಲು ಧರ್ಮದರ್ಶಿ ಹರೀಶ್ ಗೌಡ ತನು ಮನದಿ ಕಾಯುವಳು ಎಂಬ ಕನ್ನಡ ಭಕ್ತಿಗೀತೆಯ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿ ದೇವರ ಅನುಗ್ರಹವಿಲ್ಲದೆ ಯಾವುದೇ ಕೆಲಸ ಕಾರ್ಯ ನಡೆಯಲು ಸಾಧ್ಯವಿಲ್ಲ ಈ ವೇದಿಕೆಯಲ್ಲಿ ಕುಳಿತುಕೊಳ್ಳಲು ಯೋಗಬೇಕು ನಾವು ಪ್ರತಿಯೊಂದನ್ನು ಗಾಳಿ ನೀರು ಪ್ರಕೃತಿಯನ್ನು ಗಾಳಿ ನೀರು ಪ್ರಕೃತಿಯನ್ನು ದೇವರನ್ನು ನಂಬಿದವರು ತಾಲೂಕಿನಲ್ಲಿಯೇ ಮೊದಲ ಬಾರಿಗೆ ಅತಿ ಕಡಿಮೆ ಅವಧಿಯಲ್ಲಿ ವೈಭವದಿಂದ ವಿಜೃಂಭಣೆಯಿಂದ ನಡೆಯುವ ಬ್ರಹ್ಮಕಲಶೋತ್ಸವ ಎಂದರು.
ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ ಒಳ್ಳೆಯ ಮನಸ್ಸು ಇದ್ದರೆ ಇಂತಹ ಕಾರ್ಯಕ್ರಮಗಳನ್ನು ಮಾಡಲು ಅನುಕೂಲವಾಗುತ್ತದೆ ಎಂದರು.
ವೇದಿಕೆಯಲ್ಲಿ ಡಾ.ವೈ.ಉಮಾನಾಥ ಶೆಣೈ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ಬೆಳ್ತಂಗಡಿ ನಿವೃತ್ತ ಸರಕಾರಿ ನೌಕರರ ಸಂಘ ಅಧ್ಯಕ್ಷ ವಿಠಲಶೆಟ್ಟಿ, ಆಡಳಿತ ಅಧಿಕಾರಿ ಮೋಹನ್ ಬಂಗೇರ, ಬ್ರಹ್ಮಕಲಶೋತ್ಸವ ಪ್ರಧಾನ ಕಾರ್ಯದರ್ಶಿ ದಾಸಪ್ಪ ಗೌಡ ಕಾಂಜಾನು, ಆನಂದ್ ಗೌಡ ಮೈರ್ನೋಡಿ, ಬೈಲುವಾರು ಸಮಿತಿಯ ಪ್ರಮುಖರಾದ ನಿರಂಜನ್ ಮಂಟಮೆ, ಯಂ.ಚಂದ್ರಶೇಖರ ಗೌಡ ಕೊಕ್ಕಾವು, ಗಣೇಶ ಕುಂಬಾರ ದುರ್ಗಾನಗರ, ಸುರೇಶ್ ಪೂಜಾರಿ ಕುಕ್ಕಾವು, ರಮೇಶ್ ಮಾಂಜ, ಕಿರಣ್ ಗೌಡ ಕೋಡಿಯಲ್ ಹಾಗೂ ದೇವಳದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ ಮಾರಿಗುಡಿ ಕಿಲ್ಲೂರಿನ ಶ್ರೀಧರ ಉಪಾಧ್ಯಾಯ ಮತ್ತು ಹೊನ್ನಾವರದ ವೇದ ವಿದ್ವಾನ್ ಸುನಿಲ್ ಗಣಪತಿ ಹೆಗಡೆ ಇಬರನ್ನು ಗೌರವಿಸಲಾಯಿತು.
ಕಾರ್ಯಕ್ರಮವನ್ನು ರಮೇಶ್ ಪೈಲರ್ ನಿರೂಪಿಸಿ, ಕೋಶಾಧಿಕಾರಿ ಕೆ.ವಾಸುದೇವ ರಾವ್ ಕಕ್ಕೆನೇಜಿ ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ, ಡಿ.ದಿನೇಶ್ ಗೌಡ ವಂದಿಸಿದರು.